ಬದುಕಿನಲ್ಲಿ ಶಾಂತಚಿತ್ತದಿಂದ ಮುನ್ನೆಡೆಯಿರಿ

24 HRP 02
ಹರಪನಹಳ್ಳಿ ಹಾಲವರ್ತಿ ಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ ಸಹಯೋಗದೊಂದಿಗೆ ಶಿವಾನುಭವ ಸಂಪದ ಕಾರ್ಯಕ್ರಮ ನಡೆಯಿತು. ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಪೂಜಾರ, ಪುರಸಭೆ ಮಾಜಿ ಅಧ್ಯಕ್ಷ ಹರಾಳು ಅಶೋಕ, ಭೀಮಪ್ಪ ಉಪನ್ಯಾಸಕ, ಕೆ ಎಂ ಗುರುಸಿದ್ದಯ್ಯ, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಜಯಶ್ರೀ, ಬಣಕಾರ್ ರಾಜಶೇಖರ್ ಇತರರಿದ್ದರು.
Published on

ಹರಪನಹಳ್ಳಿ: ಹರ ಮುನಿದರೆ ಗುರು ಕಾಯುವನು, ಹಾಗಾಗಿ ಗುರುವಿಗಿಂತ ಮಿಗಿಲಾದದ್ದು ಯಾವುದು ಇಲ್ಲ ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ತಿಳಿಸಿದರು. ಪಟ್ಟಣದ ಹಾಲವರ್ತಿ ಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ ಸಹಯೋಗದೊಂದಿಗೆ ಶಿವಾನುಭವ ಸಂಪದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಭಾನುವಾರ ಮಾತನಾಡಿರು. ವೇದ-ಉಪನ್ಯಾಸಗಳು ಗುರುವಿನ ಬಗೆಗೆ ವಿಶೇಷ ಪ್ರಾಧಾನ್ಯತೆ ತೋರಿಸುತ್ತವೆ.

ಸಮಾಜದಲ್ಲಿ ಒಳ್ಳೆ ಕಾರ್ಯಗಳು ನಡೆಯುವಾಗ ಹಲವಾರು ವಿಘ್ನಗಳು ಬರುವುದು ಸಹಜ ಅದಕ್ಕೆ ತಲೆಕೊಡದೆ ಶಾಂತ ಚಿತ್ತದಿಂದ ಮುನ್ನಡೆದಾಗ ಬದುಕಿನ ಹಾದಿ ಸುಗಮವಾಗುತ್ತದೆ ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಮೋಸವೆಂಬ ಮಾಯೆ ತಾಂಡವವಾಡುತ್ತಿದೆ. ಶಬ್ದ, ಸ್ಪರ್ಶ, ರೂಪ, ರಸಗಳ ಹುಡುಕಾಟಕ್ಕಾಗಿ ಮನುಷ್ಯನು ಕಣ್ಣೀರು ಹಾಕುತ್ತಿದ್ದಾನೆ, ಇವುಗಳು ಸಂಸಾರದ ಸಾರಗಳಾಗಿವೆ ಎಂದರು.

ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಜ್ಞಾನಿಗಳು ಮೌನಿಗಳಾದರೆ ಮೂರ್ಖರ ಸಂಖ್ಯೆ ಅಧಿಕವಾಗುತ್ತದೆ. ಸತ್ಯದ ಹಾದಿಯನ್ನು ಯಾವತ್ತೂ ಮರೆಯಬಾರದು, ಸೃಷ್ಟಿಯೇ ದೇವರು ಎಂದರು.

ಬಾಗಳಿ ಕಲಾವಿದರಾದ ಬಣಕಾರ ರೇವಣ್ಣ, ಮಂಜುಣ್ಣ, ವಿಬಿ ವೀರೇಶ, ಡಾ. ಎಕೆ ಸಂತೋಷ್, ಬಸವರಾಜಪ್ಪ, ಶೋಭಾ, ಅನುಪಮಾ, ನೇತ್ರಾವತಿ, ಗೌರಮ್ಮ, ರೇಖಾ, ದೇವಿಕಾ ಶಾನಭಾಗ್, ದಿವಾಕರ್ ಶಾನಭಾಗ್, ಚನ್ನಪ್ಪ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net