ಬಾಯಿ, ಹಲ್ಲುಗಳ ಆರೋಗ್ಯ ರಕ್ಷಣೆಗೆ ಆದ್ಯತೆ ಇರಲಿ

29Manju7
ಬೆಳಗಾವಿ ನಗರದ ಉದ್ಯಮಭಾಗದ ಕೆಎಲ್‌ಇ ಆಸ್ಪತ್ರೆಯಲ್ಲಿ ಶುಕ್ರವಾರ ಉಚಿತ ದಂತ ತಪಾಸಣೆ ಶಿಬಿರಕ್ಕೆ ಡಾ. ಎಚ್.ಬಿ.ರಾಜಶೇಖರ ಚಾಲನೆ ನೀಡಿದರು. ಡಾ. ಎಸ್.ಸಿ. ಧಾರವಾಡ, ಡಾ. ಮದನ ಡೋಂಗ್ರೆ, ಡಾ. ಸಿ ಎನ್ ತುಗಶೆಟ್ಟಿ ಇತರರಿದ್ದರು.
Published on

ಬೆಳಗಾವಿ: ಬಾಯಿ ಹಾಗೂ ಹಲ್ಲುಗಳ ರಕ್ಷಣೆ ಆರೋಗ್ಯ ಕಾಪಾಡಿಕೊಂಡಷ್ಟೇ ಮುಖ್ಯವಾಗಿದೆ ಎಂದು ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಹೇಳಿದರು.

ನಗರದ ಉದ್ಯಮಭಾಗದ ಕೆಎಲ್‌ಇ ಆಸ್ಪತ್ರೆಯಲ್ಲಿ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ, ಕೆಎಲ್‌ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಂತ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದ ಅವರು, ನಮ್ಮ ಆರೋಗ್ಯ ವ್ಯಾಖ್ಯಾನಿಸುವಾಗ ಬಾಯಿ ಹಾಗೂ ಹಲ್ಲುಗಳ ಆರೋಗ್ಯ ಅತ್ಯಮೂಲ್ಯವಾದ ಪಾತ್ರ ವಹಿಸುತ್ತದೆ. ಅಂತೆಯೇ ವೈದ್ಯರು ತಪಾಸಣೆಯ ಸಮಯದಲ್ಲಿ ಬಾಯಿ ಪರೀಕ್ಷಿಸುತ್ತಾರೆ ಎಂದರು. ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಮಾತನಾಡಿ, ನಾವು ಆರೋಗ್ಯವಾಗಿರಬೇಕು ಎಂದರೆ ನಮಗೆ ಅವಶ್ಯಕತೆಯಿರುವ ಆಹಾರವನ್ನು ಪೌಷ್ಟಿಕಾಂಶವಾಗಿ ಮಾರ್ಪಡಿಸಿ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ದಂತಗಳ ಪಾತ್ರ ಮಹತ್ತರವಾಗಿದೆ. ಸುಂದರ ದಂತ ಪಂಕ್ತಿಗಳು ಆರೋಗ್ಯಯುತ ಶರೀರದ ಸೂಚಕವಾಗಿವೆ ಎಂದರು. ಶಿಬಿರದಲ್ಲಿ 115 ನಾಗರಿಕರಿಗೆ ದಂತ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಲಾಯಿತು. ವೈದ್ಯ ಡಾ.ಮದನ ಡೋಂಗ್ರೆ, ಡಾ.ಸಿ.ಎನ್. ತುಗಶೆಟ್ಟಿ, ಡಾ.ರೂಪಾಲಿ ಸಂಕೇಶ್ವರಿ, ಸಂತೋಷ ಇತಾಪೆ, ಮಹಾಂತೇಶ ಇಂಚಲ, ಕೃಷ್ಣಾ ಗುಮಾಸ್ತೆ, ಲಕ್ಷ್ಮೀ ಪಾಟೀಲ, ಸಾಗರ ಅಕನೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net