

ಶೃಂಗೇರಿ: ಒತ್ತುವರಿ ತೆರವಾಗಿರುವ ಮುಂದಾಗಿರುವ ಸರ್ಕಾರದ ನಡೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಸೋಮವಾರ ಸಂತೆ ಮಾರ್ಕೆಟ್ ಎದುರು ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ನೂರಾರು ವರ್ಷಗಳಿಂದ ಕೃಷಿ ಜತೆ ಕಾಡನ್ನು ಬೆಳೆಸಿ ಪ್ರಕೃತಿಗೆ ಗೌರವ ನೀಡುತ್ತಿರುವ ಮಲೆನಾಡಿನ ರೈತರನ್ನು ಬೀದಿಪಾಲು ಮಾಡಲು ಸರ್ಕಾರ ಹೊರಟಿದೆ. ಕಸ್ತೂರಿ ರಂಗನ್ ವರದಿ ಅನ್ವಯ ಒತ್ತುವರಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ ಆದರೆ ಈ ವರದಿಗೆ ಇನ್ನೂ ಜೀವವೇ ಬಂದಿಲ್ಲ ಎಂದು ತಿಳಿಸಿದರು.
ಮಲೆನಾಡಿನಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಬದಲು ಅರಣ್ಯ ಇಲಾಖೆ ಸಿಬ್ಬಂದಿ ಮನೆಬಾಗಿಲಿಗೆ ಬರುವಂತೆ ಮಾಡಿದ್ದಾರೆ. ಉಚಿತ ವಿದ್ಯುತ್ ನೀಡಿ ತೆರವಿನ ಶಾಕ್ ನೀಡಿದ್ದಾರೆ. ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯುವರು ಚಳವಳಿಗೆ ಇಳಿಯುವಂತೆ ಮಾಡಿದ್ದಾರೆ. ಅನ್ನಭಾಗ್ಯ ನೀಡುವ ಸರ್ಕಾರ ಕೃಷಿಕರ ಭೂಮಿ ತೆರವು ಮಾಡುತ್ತಿದೆ. ಕೇಂದ್ರ ಸರ್ಕಾರ ಮಾಧವ ಗಾಡ್ಗೀಳ್ ವರದಿ ಜಾರಿ ತಂದಾಗ ಜೈರಾಂ ರಮೇಶ್, ಕಸ್ತೂರಿ ರಂಗನ್ ವರದಿ ಮಾಡುವಾಗ ಜಯಂತಿ ನಟರಾಜನ್ ಮಂತ್ರಿಗಳಾಗಿದ್ದು, ಅವರು ಯಾವ ಪಕ್ಷಕ್ಕೆ ಸೇರಿದವರು ಎಂದು ಕಾಂಗ್ರೆಸ್ ಸರ್ಕಾರ ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ ಎಂದರು.
ತಹಶೀಲ್ದಾರ್ ಗೌರಮ್ಮ ಹಾಗೂ ಆರ್‌ಎ್ಒ ಮಧುಕುಮಾರ್‌ಗೆ ಮನವಿ ಸಲ್ಲಿಸಲಾಯಿತು. ಕುವೆಂಪು ಬಸ್ ನಿಲ್ದಾಣದಿಂದ ಮೆಸ್ಕಾಂ ತನಕ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಣ್ಯಪಾಲ್, ಮಂಡಲ ಅಧ್ಯಕ್ಷ ಉಮೇಶ್ ತಲಗಾರು, ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್, ವಕ್ತಾರ ದಿನೇಶ್ ಅಂಗುರ್ಡಿ, ಪಪಂ ಅಧ್ಯಕ್ಷ ಎಸ್.ವೇಣುಗೋಪಾಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗ್ಯ ನಾಗೇಂದ್ರ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಮೇಗಳಬೈಲು, ಕಚ್ಚೋಡಿ ಶ್ರೀನಿವಾಸ್, ಕೆ.ಎಸ್.ರಮೇಶ್, ಅರುಣ್ ಕುಮಾರ್,ದಿನೇಶ್ ಹೊಸೂರು, ಚೇತನ್ ಹೆಗಡೆ, ತನಿಕೋಡು ಮಂಜುನಾಥ್ ನಾಯ್ಕ, ಶ್ರೀಧರ್ ಅಣ್ಣುಕೊಡಿಗೆ, ರಾಘವೇಂದ್ರ ಹಂಚಲಿ, ಪ್ರವೀಣ್ ಇದ್ದರು.