ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿನ ಆಸಕ್ತ 100 ವಿದ್ಯಾರ್ಥಿಗಳಿಗೆ ಪರ್ವತಾರೋಹಣ ತರಬೇತಿ ಕೊಡಿಸಲು ಸರ್ಕಾರ ತೀರ್ಮಾನಿಸಿದೆ.
ಇಂಡಿಯನ್ ಮೌಂಟೆನರಿಂಗ್ ಫೌಂಡೇಶನ್ ಸಂಸ್ಥೆ ಮೂಲಕ ಪ್ರಾಥಮಿಕ ಹಂತದ ತರಬೇತಿ ಕೊಡಿಸಲು ಸರ್ಕಾರ 75 ಲಕ್ಷ ರೂ. ವೆಚ್ಚ ಮಾಡುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಷ್ಟರಲ್ಲೇ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ ಆಯ್ಕೆ ನಡೆಸಲಿದೆ.