‘ಮೌನದೊಳಗಿನ ಮಾತು ’ ಕವನ ಸಂಕಲನ ಬಿಡುಗಡೆ

mng--27 march kavana bidugade
Published on

ಮಂಗಳೂರು: ಅಮೃತ ಪ್ರಕಾಶನ ಪತ್ರಿಕೆ ವತಿಯಿಂದ ಸರಣಿ ಕೃತಿ ಬಿಡುಗಡೆ 39ನೇ ಕೃತಿ ಸಪ್ನ ದಿನಕರ್ ಅವರ ‘ಮೌನದೊಳಗಿನ ಮಾತು’ ಕವನ ಸಂಕಲನವನ್ನು ಲೇಖಕಿ, ವಿಮರ್ಶಕಿ ವಿದ್ಯಾ ನಾಯಕ್ ಬುಧವಾರ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿದರು.


ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಯುಗ ಪುರುಷ ಪತ್ರಿಕೆ ಸಂಪಾದಕ ಕುಡೆತ್ತೂರು ಭುವನಾಭಿರಾಮ ಉಡುಪ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹಾಗೂ ಲೇಖಕಿ ವೀಣಾ ಟಿ. ಶೆಟ್ಟಿ ಹಾಗೂ ಶಿಕ್ಷಕಿ ಸುಧಾ ನಾಗೇಶ್ ಮುಖ್ಯ ಅತಿಥಿಗಳಾಗಿದ್ದರು. ಕೃತಿಯ ಲೇಖಕಿ ಸಪ್ನ ದಿನಕರ್ ಉಪಸ್ಥಿತರಿದ್ದರು.


ಅಮೃತ ಪ್ರಕಾಶನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಕವಯಿತ್ರಿ ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net