ಹು-ಧಾ ಮಹಾನಗರ ಪಾಲಿಕೆಗೆ ಕೇಂದ್ರದ ಪ್ರಶಸ್ತಿ

hdmc award
Published on

ಹುಬ್ಬಳ್ಳಿ: ನನ್ನ ಲೈಫ್-ನನ್ನ ಸ್ವಚ್ಛ ನಗರ ಅಭಿಯಾನವನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕೆ ಕೇಂದ್ರ ಸರ್ಕಾರದ ನಗರ ಮತ್ತು ವಸತಿ ವ್ಯವಹಾರಗಳ ಸಚಿವಾಲಯವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಉತ್ತಮ ಆರ್​ಆರ್​ಆರ್ (ರೆಡ್ಯೂಸ್-ರಿಯೂಸ್-ರಿಸೈಕಲ್) ನಗರ ಪ್ರಶಸ್ತಿ ನೀಡಿದೆ.

ಗುರುವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ಹಾಗೂ ಪೌರಾಡಳಿಕ ನಿರ್ದೇಶನಾಲಯದ ನಿರ್ದೇಶಕಿ ಮಂಜುಶ್ರೀ ಅವರಿಗೆ ಪಾಲಿಕೆಯ ಪರಿಸರ ಇಂಜಿನಿಯರ್​ರಾದ ನಯನಾ ಕೆ.ಎಸ್. ಹಾಗೂ ಯುವರಾಜ್ ಕೆ.ಆರ್. ಪ್ರಶಸ್ತಿ ಸ್ವೀಕರಿಸಿದರು.

ನನ್ನ ಲೈಫ್-ನನ್ನ ಸ್ವಚ್ಛ ನಗರ ಅಭಿಯಾನದಡಿ ಪಾಲಿಕೆಯ ವತಿಯಿಂದ ಹು-ಧಾ ಅವಳಿನಗರದಲ್ಲಿ ಆರ್​ಆರ್​ಆರ್ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ತ್ಯಾಜ್ಯ ವಿಲೇವಾರಿ ಕುರಿತು ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸ್ಕ್ರ್ಯಾಪ್ ಆರ್ಟ್ ಪ್ರದರ್ಶನ, ಪ್ಲಾಗಥಾನ್, ಇತರೆ ತಿಳಿವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net