ಕೆಎಲ್​ಇ ಸಿಟೈ-ಎನ್​ವೆಂಚರ್ ಒಪ್ಪಂದ

enventure
Published on

ಹುಬ್ಬಳ್ಳಿ: ಉದ್ಯಮಶೀಲತೆ ಹಾಗೂ ತಂತ್ರಜ್ಞಾನ ಆಧಾರಿತ ಆವಿಷ್ಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿ-ಟೈ ಹಾಗೂ ಬೆಂಗಳೂರಿನ ಎನ್​ವೆಂಚರ್ ಇಂಜಿನಿಯರಿಂಗ್ ಎಲ್​ಎಲ್​ಪಿ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ.

ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಹಾಗೂ ಎನ್​ವೆಂಚರ್​ನ ಸಿಇಒ ಅನಿಲ ಶಿವದಾಸ್ ಒಪ್ಪಂದಕ್ಕೆ ಸಹಿ ಹಾಕಿದರು. ವಿವಿಯ ಡಾ. ಪ್ರಕಾಶ ತೇವರಿ, ಡಾ. ಬಸವರಾಜ ಅನಾಮಿ, ಡಾ. ಶರದ ಜೋಶಿ ಹಾಗೂ ಎನ್​ವೆಂಚರ್​ನ ಎಚ್​ಆರ್ ವಿಭಾಗ ಮುಖ್ಯಸ್ಥ ರವಿಶಂಕರ, ಇತರರು ಇದ್ದರು.

ಎನ್​ವೆಂಚರ್ ಇಂಜಿನಿಯರಿಂಗ್ ಕಂಪನಿಯು ಇಂಜಿನಿಯರಿಂಗ್, ಮಾಸ್ಟರ್ ಡೇಟಾ ಮ್ಯಾನೇಜಮೆಂಟ್ ಹಾಗೂ ಅನುಸರಣೆಯಲ್ಲಿ ಪರಿಣತಿಯನ್ನು ಹೊಂದಿದೆ. ಈ ಒಪ್ಪಂದವು ಉದ್ಯಮಶೀಲತೆ, ನಾವಿನ್ಯತೆಯನ್ನು ಉತ್ತೇಜಿಸಲು ಜ್ಞಾನ ವಿನಿಮಯಕ್ಕೆ ವೇದಿಕೆಯಾಗಲಿದೆ. ಉತ್ತರ ಕರ್ನಾಟಕದಂಥ 2ನೇ ಸ್ತರದ ನಗರಗಳಲ್ಲಿ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ವಿವಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net