ರಾಷ್ಟ್ರೀಯ ಹೆದ್ದಾರಿ ತಡೆದು ವಾಹನ ಚಾಲಕರಿಂದ ಪ್ರತಿಭಟನೆ

Motorists protest by blocking the national highway
Published on

ಕೆರೂರ:ಪಟ್ಟಣದಲ್ಲಿ ಮಂಗಳವಾರ ನಡೆಯುವ ಜಾನುವಾರು ಸಂತೆಯಲ್ಲಿನ ವಾಹನ ಚಾಲಕರು ಹುಬ್ಬಳ್ಳಿ& ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ಜಾನುವಾರುಗಳನ್ನು ಹೇರಿಕೊಂಡು ಬರುವ ವಾಹನ ಚಾಲಕರು ರಸ್ತೆ ಮೇಲೆ ಎರಡು ಬದಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಸ್ಥಳಿಯ ಪಿಎಸ್​ಐ ಭೀಮಪ್ಪ ರಭಕವಿ ಸ್ಥಳಕ್ಕೆ ಆಗಮಿಸಿ, ಎಲ್ಲೆಂದರಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆಗೆಸಲು ಹೋದಾಗ ಪೊಲೀಸರು ಮತ್ತು ವಾಹನ ಚಾಲಕರ ನಡುವೆ ಕಿರಿಕಿರಿ ಉಂಟಾಗಿ ಚಾಲಕರು ವಾಹನಗಳನ್ನು ರಸ್ತೆ ಮೇಲೆ ಅಡ್ಡಗಟ್ಟಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡಿದ್ದರ ಪರಿಣಾಮ ಕೆಲ ಹೊತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್​ ಭೇಟಿ ನೀಡಿ, ನಿಮ್ಮ ಸಮಸ್ಯೆ ಏನೇ ಇದ್ದರೂ ಠಾಣೆಗೆ ಬನ್ನಿ ಬಗೆಹರಿಸೋಣ ಎಂದು ತಿಳಿವಳಿಕೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆದು ಸಂಚಾರಕ್ಕೆ ಅವಕಾಶ ನೀಡಲಾಯಿತು.

ಕೆರೂರ ಪಟ್ಟಣದಲ್ಲಿ ವಾಹನ ಚಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದರಿಂದ ಮಂಗಳವಾರ ಸಂಚಾರ ದಟ್ಟಣೆ ಉಂಟಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net