70ಕ್ಕೂ ಹೆಚ್ಚು ಬೀದಿನಾಯಿಗಳ ಸೆರೆ

29srl2
Published on

ಶಿರಾಳಕೊಪ್ಪ: ಪಟ್ಟಣದಲ್ಲಿ ನಾಗರಿಕರು, ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಬೀದಿನಾಯಿಗಳ ಹಾವಳಿ ತಡೆಗೆ ಪುರಸಭೆ ಕ್ರಮ ಕೈಗೊಂಡಿದೆ. ಮಂಗಳವಾರ ನಸುಕಿನಿಂದಲೇ ಕಾರ್ಯಾಚರಣೆಗೆ ಮುಂದಾದ ಸಿಬ್ಬಂದಿ 70ಕ್ಕೂ ಅಧಿಕ ಶ್ವಾನಗಳನ್ನು ಸೆರೆಹಿಡಿದರು.

ಕಳೆದೆರಡು ದಿನಗಳ ಹಿಂದೆ ಆತಂಕ ಸೃಷ್ಟಿಸಿದ್ದ ಹುಚ್ಚುನಾಯಿ ಹಾಗೂ ನಾಗರಿಕರ ದೂರು ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕ್ರಮಕ್ಕೆ ಮುಂದಾಗಿದ್ದಾರೆ.

ಪಟ್ಟಣ ವ್ಯಾಪ್ತಿಯಲ್ಲಿ ಇರುವ ಎಲ್ಲ ನಾಯಿಗಳನ್ನು ಹಿಡಿಯಬೇಕೆಂಬ ಒತ್ತಾಯ ಇರá-ವುದರಿಂದ ಬುಧವಾರವೂ ಕಾರ್ಯಾಚರಣೆ ಮುಂದುವರಿಯಲಿದೆ. ಸೆರೆಹಿಡಿದ ಬೀದಿ ನಾಯಿಗಳನ್ನು ದೂರದ ಕಾಡಿನಲ್ಲಿ ಬಿಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ‘ವಿಜಯವಾಣಿಗೆ ಮಾಹಿತಿ ನೀಡಿದರು. ಪುರಸಭೆ ಸದಸ್ಯ ಟಿ.ರಾಜು, ಮಕಬುಲ್, ಸಂತೋಷ್, ಮನ್ಸೂರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net