ನಾಳೆಯಿಂದ ಮೋಟೋ ಫೆಸ್ಟ್: ಮೇಳ ಉದ್ಘಾಟಿಸಲಿರುವ ನಟ ಡಾಲಿ ಧನಂಜಯ್

DOLLY
Published on

ಬೆಂಗಳೂರು: ಫೋಕ್ಸ್ ವ್ಯಾಗನ್ ಸಹಯೋಗದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24x7 ನ್ಯೂಸ್ ಚಾನಲ್ ಫೆ.14 ರಿಂದ 16ರವರೆಗೆ ಜಯನಗರ 4ನೇ ಬ್ಲಾಕ್​ನಲ್ಲಿರುವ ಎಂಇಎಸ್ ಮೈದಾನದಲ್ಲಿ ಮೋಟೋ ಫೆಸ್ಟ್ ಆಯೋಜಿಸಿದೆ.

ಶುಕ್ರವಾರ ಬೆಳಗ್ಗೆ ನಟ ಡಾಲಿ ಧನಂಜಯ್ ಮತ್ತು ನಟಿ ಅಮೃತ ಅಯ್ಯಂಗಾರ್ ಚಾಲನೆ ನೀಡಲಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಶಾಸಕಿ ಸೌಮ್ಯಾರೆಡ್ಡಿ ಮತ್ತು ಪಾಲಿಕೆ ಸದಸ್ಯೆ ನಾಗರತ್ನ ರಾಮಮೂರ್ತಿ ಉಪಸ್ಥಿತರಿರಲಿದ್ದಾರೆ.

ಫೆಸ್ಟ್​ನಲ್ಲಿ ಅನೇಕ ಕಂಪನಿಗಳ ಹೊಸ ತಂತ್ರಜ್ಞಾನ ಮತ್ತು ವಿನ್ಯಾಸ ಹೊಂದಿರುವ ಕಾರು, ಬೈಕುಗಳು ಒಂದೇ ವೇದಿಕೆಗೆ ಬರಲಿವೆ. ಹೋಂಡಾ, ನಿಸ್ಸಾನ್, ದಕ್ಷಿಣ್ ಹೋಂಡಾ, ಮಾರುತಿ ಸುಜುಕಿ ಅರೇನಾ, ಟಿವಿಎಸ್ ಸುಂದರಂ ಮೋಟಾರ್ಸ್ ಸೇರಿ ವಿವಿಧ ಕಂಪನಿಗಳು ವಾಹನಗಳನ್ನು ಫೆಸ್ಟ್​ನಲ್ಲಿ ಪ್ರದರ್ಶನಕ್ಕಿಡಲಿದ್ದು, ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್ ಪಾರ್ಟ್​ನರ್​ ಆಗಿ ಕೆನರಾ ಬ್ಯಾಂಕ್ ಭಾಗವಹಿಲಿದೆ. ಮಾಹಿತಿಗೆ ಮೊ: 8884432339ಕ್ಕೆ ಸಂರ್ಪಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net