

ಧಾರವಾಡ: ವಿದ್ಯಾರ್ಥಿ ದಿಸೆಯಿಂದಲೇ ಜೀವನಕ್ಕೊಂಡು ಖಚಿತ ಗುರಿ ಇರಬೇಕಲ್ಲದೆ, ಅದರ ಹಿಂದೆಯೇ ಅದನ್ನು ಸಾಧಿಸುವ ಛಲ, ಸತತ ಪರಿಶ್ರ ಇರಬೇಕು. ಇದಕ್ಕೆ ಅಡಿಗಲ್ಲಾಗಿ ಮಾಡುವ ಕ್ರಿಯೆಯಲ್ಲಿ ಪ್ರಾಮಾಣಿಕ ಶ್ರದ್ಧೆ ಇರಬೇಕು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಜೋಶಿ ಹೇಳಿದರು.
ನಗರದ ಚಿತ್ಪಾವನ ಸಭಾ ಗೃಹದಲ್ಲಿ ಚಿತ್ಪಾವನ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಶಿಷ್ಯ ವೇತನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ಶಿಷ್ಯವೇತನ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಮ್ಮಿಂದಾಗುವ ವಿದ್ಯಾನಿಧಿಯನ್ನು ಸಂಘಟನೆಗೆ ನೀಡಿ ಸಂಸ್ಥೆಯನ್ನು ಬಲಪಡಿಸಬೇಕು ಎಂದರು.
ಚಿತ್ಪಾವನ ಸಂಘದ ಅಧ್ಯಕ್ಷ ನರಸಿಂಹ ಪರಾಂಜಪೆ ಅಧ್ಯಕ್ಷತೆ ವಹಿಸಿದ್ದರು. ಪಿ.ಆರ್.ರಿಸಬೂಡ, ಶ್ರೀಧರ ಗೋಡಬೋಲೆ, ಗಿರೀಶ ಲಿಮಯೆ, ಶ್ರೀಧರ ಜೋಗಳೇಕರ, ಶಶಿಕಾಂತ ಜೋಶಿ, ಮಂಗಲ ಫಾಟಕ, ಶುಭದಾ ಘಾಣೇಕರ, ಪ್ರತಿಭಾ ಗೋಡಬೋಲೆ, ಮಾಧುರಿ ಕಾನಡೆ, ಆಶ್ವಿನಿ ಗದ್ರೆ, ಅನಿತಾ ತಾಡಮರಿ, ವಿದ್ಯಾರ್ಥಿಗಳು, ಇತರರು ಇದ್ದರು.
ವೆಂಕಟೇಶ ಜೋಗಳೇಕರ ಸ್ವಾಗತಿಸಿದರು. ಪ್ರದೀಪ ತಾಡಮರಿ ನಿರೂಪಿಸಿದರು. ಸಂತೋಷ ಜೋಶಿ ವಂದಿಸಿದರು.