

ಧಾರವಾಡ: ಕೋವಿಡ್ನ 1 ಮತ್ತು 2ನೇ ಅಲೆಯಲ್ಲಿ ಜಿಲ್ಲೆಯ ಆರೋಗ್ಯ, ಪಾಲಿಕೆ, ಪೊಲೀಸ್ ಇನ್ನಿತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರ ಕರ್ತವ್ಯ ನಿರ್ವಹಿಸಿದ್ದಾರೆ. ಸರ್ಕಾರಿ ನೌಕರರ ಸೇವೆಯನ್ನು ಗುರುತಿಸಿ ಗೌರವಿಸುವುದರಿಂದ ಇತರ ಅಧಿಕಾರಿಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ನಗರದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಇಂಟರನ್ಯಾಶನಲ್ ಫೌಂಡೇಷನ್ ಫಾರ್ ಎಂಪವರ್ವೆುಂಟ್ ಆಂಡ್ ಸೋಶಿಯಲ್ ಜಸ್ಟಿಸ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
3ನೇ ಅಲೆಯ ಭೀತಿಯಲ್ಲಿ ಸೋಂಕಿತರ ಮನೆ ಬಾಗಿಲಿಗೆ ಔಷಧ ಕಿಟ್ ಪೂರೈಸಿದರು. ಹುಬ್ಬಳ್ಳಿಯ ಕಿಮ್ಸ್ನಲ್ಲಿ ಧಾರವಾಡ ಸೇರಿ 8 ಜಿಲ್ಲೆಗಳ ಜನರಿಗೆ ಉಪಚಾರ ನೀಡಲಾಗಿದೆ. ಕೋವಿಡ್ ಲಸಿಕೆ ಕಾರ್ಯಕ್ರಮ ದಾಖಲೆ ರೀತಿಯಲ್ಲಿ ನಡೆದಿದೆ. ಈ ಸಾಧನೆಗೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಯ ಪ್ರಾಮಾಣಿಕ ಸೇವೆ ಕಾರಣ ಎಂದರು.
ಇಂಟರ್ನ್ಯಾಶನಲ್ ಫೌಂಡೇಷನ್ ಫಾರ್ ಎಂಪವರ್ವೆುಂಟ್ ಆಂಡ್ ಸೋಶಿಯಲ್ ಜಸ್ಟಿಸ್ ಅಧ್ಯಕ್ಷ ಜಗದೀಶ ಘೊಡಕೆ ಅಧ್ಯಕ್ಷೆ ವಹಿಸಿದ್ದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಅಧೀಕ್ಷಕ ಡಾ. ಅರುಣಕುಮಾರ, ಡಿಎಚ್ಒ ಡಾ. ಬಿ.ಸಿ. ಕರಿಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ. ಚೌಡಣ್ಣವರ, ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಕೆ.ಗೋಪಿನಾಥ, ಕ್ಲಾಸಿಕ್ ಗ್ರುಪ್ ಆಫ್ ಇನ್ಸ್ಟಿಟ್ಯೂಶನ್ ಅಧ್ಯಕ್ಷ ಲಕ್ಷ್ಮಣ ಉಪ್ಪಾರ, ಡೀನ್ ಪ್ರೊ. ವಿ.ಕೆ. ಪರ್ವತಿ, ಸಮಾಜ ಸೇವಕ ಶಿವಾನಂದ ಕವಳಿ, ಸಂತೋಷ ಸವಣೂರ, ಪವನ ಗರಗ, ಬಿ.ಕೆ. ಸೋದರ, ಡಾ. ಗೀತಾ ಚವ್ಹಾಣ, ಎಸ್.ಕೆ.ದೇಶಪಾಂಡೆ, ಇತರರಿದ್ದರು. ನಾಗರಿಕ ಆರೋಗ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ವಸಂತ ಅರ್ಕಾಚಾರ ನಿರೂಪಿಸಿದರು. ಶ್ರದ್ಧಾ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಹಳ್ಯಾಳ ವಂದಿಸಿದರು.