ಸನ್ಮಾರ್ಗದಲ್ಲಿ ನಡೆಯುವಂತೆ ಜನರನ್ನು ಪ್ರೇರೇಪಿಸಿ

FEBRA., 22, HNP., Ph.2. (1)
Published on

ಹೊಳೆನರಸೀಪುರ : ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜತೆಗೆ ಜನತೆಯನ್ನು ಸನ್ಮಾರ್ಗದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುವ ಕೆಲಸ ಮಾಡಬೇಕು ಎಂದು ಎಡತೊರೆಯ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರಭಾರತೀ ಮಹಾಸ್ವಾಮೀಜಿ ಹೇಳಿದರು.

ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ರಥಬೀದಿಯಲ್ಲಿರುವ ಶ್ರೀ ನೀಲಕಂಠೇಶ್ವರ ದೇವಾಲಯ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಸನ್ಯಾಸಿ ಹೆಚ್ಚಾಗಿ ಅಧ್ಯಾತ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ಶಾಸ್ತ್ರದಲ್ಲೂ ಈ ಬಗ್ಗೆ ತಿಳಿಸದೇ ಇದ್ದರೂ ಕರ್ತವ್ಯ ಎಂದು ಸನ್ಯಾಸಿ ತಿಳಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ನಾಗೇಶ್ ಕೌಂಡಿನ್ಯ, ಶಾಖಾ ಮಠದ ಮುಖ್ಯ ಆಡಳಿತಾಧಿಕಾರಿ ಅನಂತಪದ್ಮನಾಭ, ಸ್ಥಳೀಯ ಪ್ರಮುಖರಾದ ಹೆರಂಬರಾವ್, ಶಿಲ್ಪಿ ನಾಗರಾಜಾಚಾರ್, ಪ್ರದೀಪಭಟ್, ಹೊ.ಸು.ರಮೇಶ್, ಪಟ್ಟಾಭಿರಾಮ, ಅನಂತ, ಸುಬ್ರಮಣ್ಯ, ಎಚ್.ಎಸ್.ಸುಬ್ಬಲಕ್ಷ್ಮಿ, ರಮಾಮಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net