

ಬೈಲಹೊಂಗಲ: ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಹಿರಿದಾಗಿದೆ. ತಂದೆ&ತಾಯಿ ಪರಿಶ್ರಮದ ಲವಾಗಿ ಒಂದು ಮಗು ಉತ್ತಮ ನಾಗರಿಕನಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ಕದಳಿ ಮಹಿಳಾ ಟಕದ ಅಧ್ಯೆ, ಶರಣೆ ಅನ್ನಪೂರ್ಣ ಗಣಾಚಾರಿ ಹೇಳಿದರು.
ಪಟ್ಟಣದಲ್ಲಿ ಪತ್ರಿ ಬಸವೇಶ್ವರ ನಗರ ಅಭಿವೃದ್ಧಿ ಸಂ ಮಂಗಳವಾರ ಹಮ್ಮಿಕೊಂಡಿದ್ದ 30ನೇ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಉಪನ್ಯಾಸ ನೀಡಿ, ಕುಟುಂಬ ನಿರ್ವಹಣೆ ಜತೆಗೆ ಮಗುವಿನ ಲಾಲನೆ, ಪೋಷಣೆ ಮಾಡುವಲ್ಲಿ ತಾಯಿ ಕಾರ್ಯ ಅಮೋವಾದದು. ತಾಯಂದಿರು ಅನೇಕ ದಾರ್ಶನಿಕರಿಗೆ ಜನ್ಮ ನೀಡಿ ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಆಧುನಿಕ ಜೀವನ ಶೈಲಿ, ಶಿಣ ಹಾಗೂ ವಿಶ್ವವ್ಯಾಪಿ ವೈಟ್ ಕಾಲರ್ ಉದ್ಯೋಗದಿಂದ ತಾಯಿ ಮಕ್ಕಳ ಬಾಂಧವ್ಯ ಣಿಸಿ, ಹೆತ್ತವರು ವೃದ್ಧಾಶ್ರಮ ಸೇರುತ್ತಿರುವುದು ಖೇದಕರ ಎಂದರು.
ಬೂಕರ್ ಪ್ರಶಸ್ತಿ ವಿಜೇತ ಭಾನು ಮಸ್ತಾಕ್, ದೀಪಾ ಬಸ್ತಿ ಅವರನ್ನು ಸನ್ಮಾನಿಸಲಾಯಿತು. ಸುಹಾಸಿನಿ ಸಿಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದುಂಡಯ್ಯ ಕುಲಕರ್ಣಿ, ಕಾಡಪ್ಪ ರಾಮಗುಂಡಿ, ರಾಮಲಿಂಗ ಕಾಡನ್ನವರ, ಪತ್ರಯ್ಯ ಕುಲಕರ್ಣಿ, ಅಶೋಕ ಸಾಲಿ, ವೀರಪ್ಪ ಹವಳಪ್ಪನವರ, ನಾಗನಗೌಡ ಪಾಟೀಲ, ಶ್ರೀಶೈಲ ಶರಣಪ್ಪನವರ, ಗೀತಾ ಅರಳಿಕಟ್ಟಿ, ಮಹಾದೇವಿ ಗಣಾಚಾರಿ, ಗೀತಾ ಮುದುಕನಗೌಡರ, ಗೀತಾ ಬೇವಿನಗಿಡದ, ರಾಜೇಶ್ವರಿ ದ್ಯಾಮನಗೌಡರ ಇತರರಿದ್ದರು. ಕಲಾವತಿ ಕಡಕೋಳ ಸ್ವಾಗತಿಸಿದರು. ಸಂತೋಷ ಕೊಳವಿ ವಂದಿಸಿದರು. ಸುವರ್ಣ ಬಿಜುಗುಪ್ಪಿ ನಿರೂಪಿಸಿದರು.