ತಾಯಿ ಹಾಲು ಮಗುವಿಗೆ ಸಂಜೀವಿನಿ

06-08-24-krs1
ಬೆಳಗೊಳ ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅತಿಥಿಗಳು ವಿಶ್ವ ಸ್ತನ್ಯಪಾನ ಕುರಿತು ಭಿತ್ತಿಪತ್ರ ಪ್ರದರ್ಶನ ಮಾಡಿದರು.
Published on

ಕೆ.ಆರ್.ಸಾಗರ : ಬೆಳಗೊಳ ಗ್ರಾಮದ ಡಿಜಿಟಲ್ ಗ್ರಂಥಾಲಯದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಬೆಳಗೊಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವಿ.ಸುರೇಶ್ ಚಾಲನೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಮಾತನಾಡಿ, ತಾಯಿ ಹಾಲಿನಷ್ಟು ಪೋಷಕಾಂಶ ಭರಿತ ಆಹಾರ ಭೂಮಿ ಮೇಲೆ ಯಾವುದೂ ಇಲ್ಲ. ಹೆರಿಗೆಯಾದ ಒಂದು ಗಂಟೆ ಒಳಗಾಗಿ ಮಗುವಿಗೆ ಹಾಲು ಉಣಿಸಬೇಕು. ಇದರಿಂದ ತಾಯಿಹಾಲಿನ ಉತ್ಪತ್ತಿ ವೃದ್ಧಿಸುವುದಲ್ಲದೇ ಹರಿವು ಕೂಡ ಹೆಚ್ಚುತ್ತದೆ. ತಾಯಿಯ ಹಾಲು ಮಗುವಿಗೆ ಜೀವನದ ಸಂಜೀವಿನಿ. ಈ ಕಾರಣ ತಾಯಂದಿರುವ ಹೆರಿಗೆಯಾದ ತಕ್ಷಣ ಮಗುವಿಗೆ ಹಾಲುಣಿಸಬೇಕೆಂದು ಸಲಹೆ ನೀಡಿದರು.
ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ಪ್ರಸಾದ ಮಾತನಾಡಿ, ಮಗು ಹುಟ್ಟಿದ 6 ತಿಂಗಳವರೆಗೆ ತಾಯಿ ಹಾಲು ಬಿಟ್ಟು ಬೇರೆ ಏನನ್ನು ಕೊಡಬಾರದು. ನಂತರ ಪೂರಕ ಆಹಾರದ ಜತೆ ತಾಯಿ ಹಾಲು ನೀಡುವುದನ್ನು 2 ವರ್ಷದವರೆಗೆ ಮುಂದುವರಿಸಬೇಕು. ಒಂದು ವೇಳೆ ತಾಯಿ ಅಥವಾ ಮಗು ಅನಾರೋಗ್ಯದಿಂದ ಬಳಲುತ್ತಿದ್ದರೂ ಮಗುವಿಗೆ ಹಾಲುಣಿಸುವುದನ್ನು ಮುಂದುವರಿಸಬೇಕೆಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪುಷ್ಪಾ, ಗ್ರಾ.ಪಂ. ಅಧ್ಯಕ್ಷ ಬಿ.ವಿ.ಸುರೇಶ್, ಪಿ.ಡಿ.ಒ. ಪರಮೇಶ್ವರಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಪಿ. ಹೇಮಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೋತಿ, ಶಶಿಕಲಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರಾದ ಪವಿತ್ರಾ, ರೂಪಾ, ಸುನೀತಾ, ವಿದ್ಯಾಶ್ರೀ, ಮಹಾದೇವಮ್ಮ, ಗಾಯತ್ರಿ, ಯಶೋದಾ, ರತ್ನಾ ಹಾಗೂ ಆಶಾ ಕಾರ್ಯಕರ್ತೆಯರಾದ ಶಿವಕನ್ಯಾ, ಪವಿತ್ರಾ, ಲೀಲಾವತಿ ಮತ್ತು ಗರ್ಭಿಯಣಿಯರು, ಬಾಣಂತಿಯರು, ಮಕ್ಕಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net