ಅಮ್ಮನ ಮಡಿಲು ಶ್ರೇಷ್ಠ ಗ್ರಂಥ

Mother's lap is a great book
ವಿಜಯಪುರದ ಜಿಲ್ಲಾ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಮ್ಮನ ಮಡಿಲು ಗ್ರಂಥವನ್ನು ಗಣ್ಯರು ಬಿಡುಗಡೆಗೊಳಿಸಿದರು. ಶಂಕರ ಮಾರಿಹಾಳ, ಎಸ್​.ಎಂ. ಕಣಬೂರ, ಮಮತಾ ಮುಳಸಾವಳಗಿ ಮತ್ತಿತರರಿದ್ದರು.
Published on

ವಿಜಯಪುರ: ಅಮ್ಮನ ಮಡಿಲು ಸರ್ವ ಶ್ರೇಷ್ಠ ಗ್ರಂಥ. ಅಮ್ಮಳ ಸೇವೆ ಅಪಾರ ಹಾಗೂ ಸ್ಮರಣೀಯ. ಅಮ್ಮನೇ ನಮಗೆ ದೇವರು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹೇಳಿದರು.

ನಗರದ ಜಿಲ್ಲಾ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಲೇಖಕಿ ಮಮತಾ ಮುಳಸಾವಳಗಿ ಅವರು ರಚಿಸಿದ ಕೃತಿ ಅಮ್ಮನ ಮಡಿಲು ಗ್ರಂಥ ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾಯಿಯ ಕುರಿತು ಬರೆದ ಗ್ರಂಥ ಸರ್ವ ಶ್ರೇಷ್ಠ ವಾಗಿದೆ ಎಂದರು.

ನಿವೃತ ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್​.ಎಂ. ಕಣಬೂರ ಮಾತನಾಡಿ, ಸುಖ&ದು@ಖಕ್ಕೆ ಅಮ್ಮಳ ಮಡಿಲು ಹಿತ ನೀಡುವಂತದ್ದು, ತಾಯಿಗಿಂತ ಯಾರೂ ದೊಡ್ಡವರಲ್ಲ. ಸದ್ಯ ಬಿಡುಗಡೆಗೊಂಡ ಕೃತಿಯಲ್ಲಿ ಏಳು ಪ್ರಮುಖ ಲೇಖನಗಳು ಅಡಕವಾಗಿದ್ದು, ಪ್ರತಿಯೊಬ್ಬರೂ ಓದಲೇ ಬೇಕಾದ ಗ್ರಂಥವಿದು ಎಂದರು.

ಕಸಾಪ ಸಂಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮತ್ತು ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು.

ಡಿಎಸ್​ಪಿ ಬಸವರಾಜ ಯಲಗಾರ, ಲೇಖಕಿ ಮಮತಾ ಮುಳಸಾವಳಗಿ, ವಿಶ್ರಾಂತ ಪ್ರಾಚಾರ್ಯ ಬಿ.ಎಂ. ಅಜೂರ, ಎನ್​.ಆರ್​. ಕುಲಕರ್ಣಿ. ನ್ಯಾಯವಾದಿ ವಿ.ಎಸ್​. ಖಾಡೆ, ಮಹಮ್ಮದಗೌಸ್​ ಹವಾಲ್ದಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಆಶಾ ಬಿರಾದಾರ, ಮಹಮ್ಮದಗೌಸ್​ ಹವಾಲ್ದಾರ, ವಿಜಯಲಕ್ಷಿ$್ಮ ಹಳಕಟ್ಟಿ, ಅರ್ಜುನ ಶಿರೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net