

ಶಿರೋಳ: ತಾಯಿ ಇಲ್ಲದಿದ್ದರೆ ಭೂಮಿ ಮೇಲೆ ಏನೂ ಇಲ್ಲ. ಸನಾತನ ಸಂಸ್ಕೃತಿಯಲ್ಲಿ ತಾಯಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಬೀಳಗಿಯ ಜ್ಞಾನ ಸಿದ್ಧಾಶ್ರಮದ ಶ್ರೀ ಜ್ಞಾನಾನಂದ ಶರಣರು ನುಡಿದರು.
ಗ್ರಾಮದ ಜಗದ್ಗುರು ಶ್ರೀ ಯಚ್ಚರಸ್ವಾಮಿಗಳ ಗವಿಮಠದಲ್ಲಿ ಆಯೋಜಿಸಿದ್ದ 17ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀಅಭಿನವ ಯಚ್ಚರ ಮಹಾಸ್ವಾಮೀಜಿ, ಇಡೀ ಜೀವನ ಸ್ತ್ರೀ ಅವಲಂಬಿತವಾಗಿದೆ. ತಾಯಿ, ತಂಗಿ, ಅಕ್ಕ, ಮಡದಿಯಾಗಿ ಮಹಿಳೆಯ ಪಾತ್ರವಿರುತ್ತದೆ. ಒಂದು ಮನೆಯನ್ನು ಸುಂದರವಾಗಿಸಿ, ಸಮಾಜವನ್ನು ತಿದ್ದುವ ಶಕ್ತಿ ಮಹಿಳೆಯಲ್ಲಿದೆ. ಮಹಿಳೆ ಇಲ್ಲದೆ ಯಾರ ಜೀವನವೂ ಮುನ್ನಡೆಯಲು ಸಾಧ್ಯವಿಲ್ಲ ಎಂದರು.
ಶಿಕ್ಷಕ ಎಚ್.ವಿ. ಬ್ಯಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಗವಿಮಠ ಪ್ರತಿಯೊಂದು ರಂಗದಲ್ಲೂ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದೆ. ಗವಿಮಠದ ಕಾರ್ಯ ಶ್ಲಾಘನೀಯ ಎಂದರು. ನರೇಗಲ್ಲ ಗ್ರಾಮದ ಶಿಕ್ಷಕಿ ರಿಂದಮ್ಮ ವಡ್ಡಟ್ಟಿ ಮಾತನಾಡಿದರು ಶಿಕ್ಷಕಿಯರಾದ ಜಿ.ಬಿ. ಚಿಕ್ಕಣ್ಣವರ್, ಎಸ್.ಪಿ. ಅಂಬೋರಿ, ಇ.ಎಂ. ನದಾಫ, ರೇಣುಕಾ ಎಚ್. ಬ್ಯಾಡಗಿ, ಆರೋಗ್ಯ ಸಹಾಯಕಿ ಆರ್. ಸುಮಿತ್ರಾ, ಎಂ.ಎಚ್. ಶಾಂತಪ್ಪನವರ ಅವರನ್ನು ಸನ್ಮಾನಿಸಲಾಯಿತು, ಸುನಿಲ ಕಳಸದ ನಿರೂಪಿಸಿ, ಶ್ರೀಕಾತ ದೊಡಮನಿ ಸ್ವಾಗತಿಸಿ, ಎಸ್.ವೈ. ಮುಲ್ಕಿಪಾಟೀಲ ವಂದಿಸಿದರು.