ಜಾನಪದ ಸಾಹಿತ್ಯ ರಂಗಭೂಮಿಗೆ ತಾಯಿಬೇರು

4RAM3
Published on

ರಾಮದುರ್ಗ: ಜಾನಪದ ಸಾಹಿತ್ಯ, ಕಲೆ ಭಾರತೀಯ ಪರಂಪರೆ ಮತ್ತು ರಂಗಭೂಮಿಗೆ ತಾಯಿ ಬೇರು ಇದ್ದಂತೆ. ಜೀವನದ ಮೌಲ್ಯಗಳನ್ನು ತಿಳಿಸುವ ಜತೆಗೆ ಮನಸ್ಸಿಗೆ ಮುದ ನೀಡುವ ಕಲೆಯಾಗಿದೆ ಎಂದು ನಿವತ್ತ ಉಪನ್ಯಾಸಕ ಪಿ.ಎಲ್. ಮಿಸಾಳೆ ಹೇಳಿದರು.

ತಾಲೂಕಿನ ಮನಿಹಾಳ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಮಾರುತೇಶ್ವರ ಮೂರ್ತಿ, ಗೋಪುರದ ಕಸಾರೋಹಣ, ಶಿಬಾಗಟ್ಟಿ ಹಾಗೂ ನಾಗಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಈಚೆಗೆ ಏರ್ಪಡಿಸಿದ್ದ ಜಾನಪದ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮನಿಹಾಳ ಸುರೇಬಾನ ಗ್ರಾಮಗಳು ಜಾನಪದ ಕಲೆಯ ತವರೂರು ಇದ್ದಂತೆ ಎಂದರು.

ಮನಿಹಾಳ ಗ್ರಾಮದ ಶಂಕ್ರಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ಎನ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದಾನಿಗಳಿಗೆ ಸನ್ಮಾಸಲಾಯಿತು. ಭೋಜಪ್ಪ ಮುಗನೂರ, ಶಿವಾನಂದ ಕೀಲಿಪುಟ್ಟಿ, ಅಂದಾನೆಪ್ಪ ಶಿರೂರು, ಗುರುನಾಥ ನಿಂಗರೆಡ್ಡಿ,

ಶಂಕ್ರಣ್ಣ ತುಂಬಳ, ಬಸವರಾಜ ಕಠಾರಿ, ದ್ಯಾಮಣ್ಣ ಸಿರಿ, ಪುಂಡಲೀಕಪ್ಪ ಕರದಿನ, ಬಸವರಾಜ ಶಿರೂರ, ಚಿನ್ನಪ್ಪ ಕಳಸನ್ನವರ, ಮಹಾದೇವ ಹುಲ್ಲೂರ, ಗೋಪಾಲ ಸುಣಗಾರ, ಶಿವನಗೌಡ ಪಾಟೀಲ, ಸೋಮನಗೌಡ ಪಾಟೀಲ, ಮಾರುದ್ರ ಮುಖಾರಿ ಇತರರಿದ್ದರು. ದಯಾನಂದ ಶಿರೂರ ಸ್ವಾಗತಿಸಿ ವಂದಿಸಿದರು. ದರ್ಶನ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net