

ಬೆಳಗಾವಿ : ತನ್ನ ಅಕ್ರಮ ಸಂಬಂಧ ನೋಡಿದ ಹತ್ತು ವರ್ಷದ ಮಗನನ್ನು ಬಾವಿಗೆ ತಳ್ಳಿ ಕೊಲೆಗೈದು ಗಂಡನಿಂದ ಮರೆಮಾಚಿ ಅನೈತಿಕ ಸಂಬಂಧ ಮುಂದುವರಿಸಿದ್ದವಳ ಆರೋಪ ಸಾಬೀತಾಗಿದ್ದರಿಂದ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 7 ಸಾವಿರ ರೂ.ದಂಡ ವಿಧಿಸಿ, ಸೋಮವಾರ ತೀರ್ಪು ಪ್ರಕಟಿಸಿದೆ.
ಬೆಲ್ಲದ ಬಾಗೇವಾಡಿಯ ಸುಧಾ ಸುರೇಶ ಕರಿಗಾರ(31) ಶಿಕ್ಷೆಗೆ ಗುರಿಯಾದವರು. ಆಕೆಯ ಮಗ ಪ್ರವೀಣ ಸುರೇಶ ಬಾಗೇವಾಡಿ ತಾಯಿಯಿಂದಲೇ ಕೊಲೆಯಾದ ದುರ್ಧೈವಿ. ಈ ಬಗ್ಗೆ 2019ರಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ ಸಿಪಿಐ ಕಲ್ಯಾಣ ಶೆಟ್ಟಿ ಅವರು, ತಾಯಿಯೇ ತನ್ನ ಅನೈತಿಕ ಸಂಬಂಧ ಮುಚ್ಚಿಡಲು ಹಿರಿಮಗನ ಹತ್ಯ ಮಾಡಿ, ಚಿಕ್ಕ ಮಗನಿಗೂ ಜೀವ ಬೆದರಿಕೆವೊಡ್ಡಿದ್ದರ ಬಗ್ಗೆ ಸಾಕ್ಷಾೃಧಾರಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾೀಶರಾದ ಎಸ್.ಎಲ್.ಚವ್ಹಾಣ ಅವರು, ಸಾಕ್ಷಾೃಧಾರಗಳನ್ನು ಪರಿಶೀಲಿಸಿ, ಆರೋಪ ಸಾಬೀತಾಗಿದ್ದರಿಂದ ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ವಕಾಲತ್ತು ವಹಿಸಿದ್ದರು.
ಪ್ರಕರಣದ ಹಿನ್ನೆಲೆ: ರಾಮಪ್ಪ ಕೆಂಚಪ್ಪ ಬಸ್ತವಾಡ ಜತೆ ಅನೈತಿಕ ಸಂಬಂಧ ಹೊಂದಿದ್ದು, 2019ರ ಅ.22ರಂದು ಅವರ ಖಾಸಗಿ ಕ್ಷಣಗಳ ದೃಶ್ಯವನ್ನು ಮಗ ಪ್ರವೀಣ ನೋಡಿ, ತಂದೆಗೆ ಹೇಳುತ್ತೇನೆ ಅಂತಾ ಓಡಿ ಹೋಗುತ್ತಿದ್ದಾಗ ‘ತನ್ನ ಗಂಡನಿಗೆ ಹೇಳಿದರೆ ಜೀವನ ಹಾಳಾಗುತ್ತದೆ’ ಎಂದು ಊಹಿಸಿ ಕೊಲೆ ಮಾಡುವ ಉದ್ದೇಶದಿಂದ ಆತನಿಗೆ 50 ರೂ.ಕೊಟ್ಟು ಅಂಗಡಿಗೆ ತಿನಿಸು ತರಲು ಇನ್ನೊಬ್ಬ ಮಗ ಪ್ರಜ್ವಲ ಜತೆಗೆ ಕಳುಹಿಸುತ್ತಾಳೆ. ಅಲ್ಲದೇ, ಹಿಂದಿನಿಂದ ತಾನೂ ಹೋಗಿ ‘ಮಕ್ಕಳು ತಿನಿಸು ತೆಗೆದುಕೊಂಡು ಮರಳಿ ಬರುತ್ತಿದ್ದಾಗ’ ಖಾಸಗಿ ಜಮೀನನಲ್ಲಿ ಮಧ್ಯಾಹ್ನ ಮಗ ಪ್ರವೀಣನನ್ನು ನೂಕಿ ಕೊಲೆಗೈದಿದ್ದಾಳೆ. ಇದನ್ನು ನೋಡಿದ ತನ್ನ ಇನ್ನೊಬ್ಬ ಮಗ ಪ್ರಜ್ವಲನಿಗೂ ‘ಈ ವಿಷಯ ನೀನು ಯಾರ ಮುಂದೆಯಾದರೂ ಹೇಳಿದರೆ ನಿನ್ನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು.