

ಅಳವಂಡಿ: ಮಗುವಿಗೆ 6ತಿಂಗಳವರೆಗೂ ತಾಯಿ ಎದೆ ಹಾಲುನ್ನೆ ನೀಡಬೇಕು. ಇದರಿಂದ ಮಗು ಸದೃಡವಾಗಿ, ಆರೋಗ್ಯವಾಗಿ ಬೆಳೆಯಲಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ.ಚಿದನಾಂದ ವಾಚದಮಠ ತಿಳಿಸಿದರು.
ಇದನ್ನೂ ಓದಿ:http://ತಾಯಿಯ ಹಾಲು ಅಮೃತಕ್ಕೆ ಸಮಾನ
ಕವಲೂರು ಗ್ರಾಮದಲ್ಲಿ ವಿವಿಧ ಇಲಾಖೆಯಿಂದ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಎದೆಹಾಲಿನ ಮಹತ್ವವನ್ನು ತಾಯಂದಿರು ತಿಳಿದುಕೊಳ್ಳಿ.
ಹಾಲನ್ನು ಮಕ್ಕಳಿಗೆ ನೀಡಲು ಪಾಲಕರು ಉತ್ತೇಜಿಸಬೇಕು ಇದು ಮಕ್ಕಳ ಆರೋಗ್ಯವನ್ನು ಸದೃಡಗೊಳಿಸುತ್ತದೆ. ಮಗುವಿಗೆ ಎದೆಹಾಲು ನೀಡುವದರಿಂದ ಶಿಶು ಮರಣ ತಪ್ಪಿಸಬಹುದು ಹಾಗೂ ಗರ್ಭಧರಿಸಲು ಹೆಚ್ಚು ಸಮಯ ಹಿಡಿಯುತ್ತದೆ.
ಶಾಂತ ಚಿತ್ತದಿಂದ ಹಾಲು ಉಣಬಡಿಸಿದ ನಂತರ ಮಗುವಿನ ಬೆನ್ನನ್ನು ನವಿರಾಗಿ ಸವರಬೇಕು. ಮಗುವಿಗೆ ಎದೆಹಾಲು ನೀಡುವದು ಪ್ರತಿ ತಾಯಿಯ ಜವಾಬ್ದಾರಿಯಾಗಿದೆ ಎಂದರು.
ಆರೋಗ್ಯ ನೀರಿಕ್ಷಣಾಧಿಕಾರಿ ಜಿ.ಎಸ್.ಬೂಸನೂರಮಠ, ಆರೋಗ್ಯ ಸುರಕ್ಷತಾಧಿಕಾರಿ ಬಸಮ್ಮ ಮಾಲಿಪಾಟೀಲ, ಶಾಹಿನಬೇಗಂ, ಅಂಗನವಾಡಿ ಕಾರ್ಯಕರ್ತೆ ಅನ್ನಪೂರ್ಣ, ಆಶಾ ಕಾರ್ಯಕರ್ತೆ ಲಲಿತಾ ಹಾಗೂ ತಾಯಂದಿರು ಭಾಗವಹಿಸಿದ್ದರು.