ಮೇರಿ ಮಾತೆ ಉತ್ಸವಕ್ಕೆ ತೆರೆ

9BDVT3(B)
ಭದ್ರಾವತಿ ನ್ಯೂಟೌನ್ ವೇಲಾಂಗಣಿ ಚರ್ಚ್‌ನಲ್ಲಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ.
Published on

ಭದ್ರಾವತಿ: ಮೇರಿ ಮಾತೆಯ ಹತ್ತು ದಿನಗಳ ಉತ್ಸವ ಶುಕ್ರವಾರ ಸಂಪನ್ನಗೊಂಡಿತು. ಬೆಳಗ್ಗೆನಿಂದ ದಿವ್ಯ ಬಲಿಪೂಜೆ ನಿರಂತರವಾಗಿ ನಡೆಯಿತು. ಸಂಜೆ ಗಾಯನ ಸೇವೆ ಸಲ್ಲಿಸಲಾಯಿತು. ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಾದರ್ ್ರಾನ್ಸಿಸ್ ಪೂಜೆ ನೆರವೇರಿಸಿದರು. ಭಕ್ತಾದಿಗಳು ಧರ್ಮಗುರುಗಳ ಮಾರ್ಗದರ್ಶನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಮೇರಿ ಮಾತೆ ಮುಂದೆ ಮೇಣದ ಬತ್ತಿ ಬೆಳಗಿಸಿದರು. ತರಕಾರಿ, ದವಸ-ಧಾನ್ಯ, ತೆಂಗಿನಕಾಯಿ, ಹಣ್ಣು-ಹೂವನ್ನು ಮೇರಿ ಮಾತೆಗೆ ಪಾದಕ್ಕೆ ಅರ್ಪಿಸುವ ಮೂಲಕ ಹರಕೆ ಸಲ್ಲಿಸಿದರು.ಉತ್ಸವದ ನಿಮಿತ್ತ ಚರ್ಚ್‌ಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net