ಮಾತೃ ಭಾಷೆ ಉಸಿರಾಗಲಿ

26Manju5
ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಲರವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ. ಎಸ್.ಎಸ್. ತೇರದಾಳ, ಜೆ.ಎಂ. ಕಾಲಿಮಿರ್ಚಿ, ಡಾ. ಸಾವುಕಾರ ಕಾಂಬ್ಳೆ, ಡಾ. ನಾರಾಯಣ ನಾಯ್ಕ, ಭಾರತಿ ನಾಯಕ ಇತರರಿದ್ದರು.
Published on

ಬೆಳಗಾವಿ: ನಾಡು, ನುಡಿ ಬಗ್ಗೆ ಗೌರವವಿರಬೇಕು. ನಾವು ಎಲ್ಲಿಯತನಕ ಕನ್ನಡ ಬಳಸುತ್ತೇವೆಯೋ ಅಲ್ಲಿಯತನಕ ಕನ್ನಡಕ್ಕೆ ಅಳಿವು ಇಲ್ಲ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎಸ್. ತೇರದಾಳ ಹೇಳಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ ಬಳಗ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಕಲರವ ಎಂಬ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಭಾಷೆಯ ಜತೆಗೆ ಒಂದು ಸಂಸ್ಕೃತಿಯೂ ಜೀವಂತವಾಗಿರುತ್ತದೆ. ವತ್ತಿಗಾಗಿ ಯಾವುದೇ ಭಾಷೆಯನ್ನು ಬಳಸಲಿ ಅದರಾಚೆಗೆ ಕನ್ನಡ ನಮ್ಮ ಉಸಿರಾಗಿರಲಿ ಎಂದರು.

ಮಹಾವಿದ್ಯಾಲಯದಲ್ಲಿ ಕನ್ನಡದ ಕುರಿತು ಇಂತಹ ಒಂದು ಭವ್ಯ ಕಾರ್ಯಕ್ರಮ ಮೊದಲ ಬಾರಿಗೆ ಜರುಗುತ್ತಿದೆ. ಅದು ವಿರ್ದ್ಯಾರ್ಥಿಗಳೇ ಸ್ವ ಇಚ್ಛೆಯಿಂದ ಈ ಕಾರ್ಯಕ್ರಮ ಮಾಡಿರುವುದರಿಂದ ಅವರಲ್ಲಿರುವ ಕನ್ನಡ ಪ್ರೇಮ ಇನ್ನಷ್ಟು ಜಾಗತವಾಗಿದೆ. ಗಡಿಭಾಗದಲ್ಲಿ ಇಂತಹ ಕನ್ನಡದ ಕಾರ್ಯಕ್ರಮದ ಅವಶ್ಯವಿದೆ. ಇದರಿಂದಾಗಿ ಕನ್ನಡ ಪರಿಸರವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದರು.

ಮಾಳಮಾರುತಿ ಪೊಲೀಸ್ ಠಾಣೆ ಪಿಐ ಜೆ.ಎಂ. ಕಾಲಿಮಿರ್ಚಿ ಮಾತನಾಡಿ, ಗಡಿನಾಡಿನಲ್ಲಿ ಕನ್ನಡದ ಸೌರಭ ಕಹಳೆ ಮೊಳಗುತ್ತ, ಕನ್ನಡವನ್ನು ಸಶಕ್ತವಾಗಿ ಕಟ್ಟುವ, ಬಿತ್ತರಿಸುವ ಕಾರ್ಯವನ್ನು ಸಂಘ-ಸಂಸ್ಥೆಗಳು, ಶಾಲೆ- ಕಾಲೇಜುಗಳು ನಿರಂತರ ಮಾಡುತ್ತಿರಬೇಕು. ವಿದ್ಯಾರ್ಥಿಗಳು ನಾಡು ನುಡಿ, ಸಂಸ್ಕೃತಿ, ಪರಂಪರೆ ಮೈಗೂಡಿಸಿಕೊಳ್ಳಬೇಕು ಎಂದರು. ಪೂರ್ವಜರು ಅರ್ಥಪೂರ್ಣ ಬದುಕಿಗೆ ಬೇಕಾದ ಅಗಾಧವಾದ ಜ್ಞಾನ ಭಂಡಾರವನ್ನು ನಮಗಾಗಿ ಕೊಟ್ಟಿದ್ದಾರೆ. ಅವುಗಳನ್ನು ಓದುವ ಮೂಲಕ ಆದರ್ಶ ಬದುಕು ರೂಪಿಸಿಕೊಳ್ಳಬೇಕು. ನಾವು ಬೆಳೆದು ಬಂದ ಸ್ಥಿತಿಗತಿ, ಪರಿಸರವನ್ನು ನಮ್ಮ ಬೆನ್ನಿಗೆ ಕಟ್ಟಿಕೊಂಡೇ ಬಂದಾಗ ನಾವು ಸಾಧಕರಾಗುತ್ತೇವೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಾವುಕಾರ ಕಾಂಬ್ಳೆ, ಡಾ. ನಾರಾಯಣ ನಾಯ್ಕ, ಭಾರತಿ ನಾಯಕ, ಡಾ. ವೈ.ಎ.ಜಕ್ಕಣವರ, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಗಮನ ಸೆಳೆದ ಅದ್ದೂರಿ ಮೆವರಣಿಗೆ

ಕನ್ನಡಾಂಬೆ ಮತ್ತು ಸಂಗೊಳ್ಳಿ ರಾಯಣ್ಣನ ಭವ್ಯ ಮೂರ್ತಿಗಳನ್ನು ಒಳಗೊಂಡ ರೂಪಕ ವಾಹನ ಮೆರವಣಿಗೆ ಮಹಾವಿದ್ಯಾಲಯದಿಂದ ಮಾಳಮಾರುತಿ ಮಾರ್ಗವಾಗಿ ಸಾಗಿ ಶ್ರೀನಗರ ಗಾರ್ಡನ್ ವತ್ತವನ್ನು ಸುತ್ತುವರಿದು ಪುನಃ ಮಹಾವಿದ್ಯಾಲಯಕ್ಕೆ ಬಂದು ಮುಕ್ತಾಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net