ಮಕ್ಕಳನ್ನ ಸಾಕುವುದಕ್ಕೆ ಕಷ್ಟವಾಗುತ್ತಿದೆ ಎಂದು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದ ತಾಯಿ

mother killed
Published on

ಬೆಂಗಳೂರು: ಕೆಲಸ ಇಲ್ಲದೇ ಮಕ್ಕಳಿಬ್ಬರನ್ನ ಸಾಕುವುದಕ್ಕೆ ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಮಹಿಳೆಯೊಬ್ಬಳು ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತ ಮಕ್ಕಳನ್ನು ಲಕ್ಷ್ಮಿ (7) ಮತ್ತು ಗೌತಮ್ (9) ಎಂದು ಗುರುತಿಸಲಾಗಿದೆ. ಇವರನ್ನು ತಾಯಿ ಗಂಗಾದೇವಿ ಕೊಲೆ ಮಾಡಿದ ಪಾಪಿ ತಾಯಿ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಡೆದಿದ್ದೇನು?: ಗಂಗಾದೇವಿ ಮೂಲತಃ ಆಂಧ್ರ ಮೂಲದವಳು. ಬೆಂಗಳೂರಿನಲ್ಲಿ ಮಕ್ಕಳ ಜತೆ ದಂಪತಿ ವಾಸವಾಗಿದ್ದರು. ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡ್ತಿದ್ದಳು. ಗಂಗಾದೇವಿ ಕಳೆದ ಮಾರ್ಚ್ ತಿಂಗಳಲ್ಲಿ ಗಂಡನ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಳು. ಗಂಡ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗುತ್ತಿದ್ದಾನೆಂದು ದೂರು ನೀಡಿದ್ದಳು. ಗಂಗಾದೇವಿ ಕೊಟ್ಟ ದೂರಿನ ಆಧಾರದ ಮೇಲೆ ಗಂಡನನ್ನ ಬಂಧಿಸಿ ಜಾಲಹಳ್ಳಿ ಪೊಲೀಸರು ಜೈಲಿಗೆ ಕಳಿಸಿದ್ದರು.

ಕೆಲಸ ಇಲ್ಲದೇ ಮಕ್ಕಳಿಬ್ಬರನ್ನ ಸಾಕುವುದಕ್ಕೆ ಕಷ್ಟವಾಗುತ್ತಿತ್ತು. ಆ ಕಾರಣಕ್ಕಾಗಿ ಇಬ್ಬರು ಮಕ್ಕಳನ್ನ ರಾತ್ರಿ 9:30ಕ್ಕೆ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಮಕ್ಕಳನ್ನು ಕೊಂದಿದ್ದಾಳೆ. ಸದ್ಯ ಕೊಲೆ ಆರೋಪಿ ತಾಯಿ ಗಂಗಾದೇವಿಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net