

ಭಾಲ್ಕಿ: ಹನ್ನೆರಡನೇ ಶತಮಾನದಲ್ಲಿ ಮಹಿಳೆಯರಿಗೆ ಗಂಗಾಂಬಿಕೆ ತಾಯಿ ಅಕ್ಷರ ಜ್ಞಾನ ಕಲ್ಪಿಸಿ ವಚನ ರಚನೆಗೆ ಪ್ರೇರಣೆ ನೀಡಿದರು ಎಂದು ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಶ್ರೀ ಮಹಾಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ಶರಣೆ ಗಂಗಾಂಬಿಕೆ ಜಯಂತಿ ಮತ್ತು ೪೮೧ನೆಯ ಮಾಸಿಕ ಶಿವಾನುಭ ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಶರಣೆ ಗಂಗಾಂಬಿಕೆ ಮಹಾಮನೆಯ ಮಹಾತಾಯಿ ಆಗಿದ್ದರು. ವಿಶ್ವಗುರು ಬಸವಣ್ಣನವರು ಎಲ್ಲ ಶರಣರನ್ನು ಒಪ್ಪಿಕೊಂಡರು. ಮಹಾಮನೆಗೆ ಆಗಮಿಸಿದ ಶರಣ ಬಳಗಕ್ಕೆ ಆದರಾತಿಥ್ಯ ಹಾಗೂ ಪ್ರಸಾದ ವ್ಯವಸ್ಥೆಯಲ್ಲಿ ಗಂಗಾAಬಿಕೆ ಮತ್ತು ನೀಲಾಂಬಿಕೆ ತಾಯಿ ತೊಡಗಿಸಿಕೊಂಡಿದ್ದರು ಎಂದರು.
ಕಲ್ಯಾಣ ಕ್ರಾಂತಿ ನಂತರ ವಚನ ಸಾಹಿತ್ಯ ರಕ್ಷಣೆಗಾಗಿ ಗಂಗಾಂಬಿಕೆ ತಾಯಿ ಅವರು ಚನ್ನಬಸವಣ್ಣನವರ ನೇತೃತ್ವದಲ್ಲಿ ಉಳವಿ ಕಡೆ ಹೋದರು. ಬಿಜ್ಜಳ ಸೈನ್ಯರೊಂದಿಗೆ ಹೋರಾಡಿ ಹುತಾತ್ಮರಾದ ವೀರಮಾತೆ ಗಂಗಾಂಬಿಕೆ. ಅವರ ಸ್ಮರಣೆ ನಮ್ಮೆಲ್ಲರಿಗೆ ವಚನ ಸಂಸ್ಕೃತಿ ರಕ್ಷಣೆಗೆ ಪ್ರೇರಣೆ ನೀಡಲಿದೆ ಎಂದು ನುಡಿದರು.
ಮುಕ್ತಾಬಾಯಿ ಮಲ್ಲಿಕಾರ್ಜುನ ಕಿಟ್ಟಾ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯ ಸಂತೋಷ ಚನ್ನಶೆಟ್ಟಿ ಅನುಭಾವ ನೀಡಿದರು. ಚಂದ್ರಕಲಾ ಪ್ರಭು ಡಿಗ್ಗೆ ಬಸವಗುರು ಪೂಜೆ ನೆರವೇರಿಸಿದರು. ಮಹಿಳಾ ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಧರ್ಮಗ್ರಂಥ ಪಠಣ ಮಾಡಿದರು.
ಪುಷ್ಪಾವತಿ ಕಾಶಪ್ಪ ಬಳತೆ, ರೇಖಾ ಶಿವರಾಜಪ್ಪ ಜೋತೆಪ್ಪನೊರ, ಶ್ರೀದೇವಿ ಶಾಂತಯ್ಯ ಸ್ವಾಮಿ, ಸುವರ್ಣಾ ಧನರಾಜ ಬಿರಾದಾರ, ಶೋಭಾ ಪ್ರಭು ಸಾವಳೆ, ಉಮಾ ಶಿವಕುಮಾರ ಪಾಟೀಲ್ ಇತರರಿದ್ದರು. ಸವಿತಾ ಭೂರೆ ಸ್ವಾಗತಿಸಿದರು. ಸುವರ್ಣಾ ಓಂಕಾರ ಬಲ್ಲೂರೆ ನಿರೂಪಣೆ ಮಾಡಿದರು. ಜ್ಯೋತಿ ಧನರಾಜ ಮೀನಕೆರೆ ವಂದಿಸಿದರು.