ಭಾರತಮಾತೆಯ ಉತ್ತಮ ಸೇವೆ ಲಭಿಸಿದೆ

tdl 21 sanman
ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದ ಚಂದ್ರಗಿರಿದೇವಿ ಹಾಗೂ ಗಂಗಾಧರ ಮಠದಲ್ಲಿ ಅಗ್ನಿವೀರ ಸೇನೆಗೆ ಆಯ್ಕೆಯಾದ ಯುವಕರನ್ನು ಶ್ರೀಮಠದ ಸೋಮಯ್ಯ ಮಠದ ಸನ್ಮಾನಿಸಿದರು. ಲಕ್ಷ್ಮಣ ಯಾದವಾಡ, ಜಗದೀಶ ಝಾರಿ ಇತರರಿದ್ದರು.
Published on

ತೇರದಾಳ: ದೇಶದ ರಕ್ಷಣೆಗಾಗಿ ಸೈನಿಕ ಸೇವೆಗೆ ಗ್ರಾಮದ ಯುವಕರು ಆಯ್ಕೆಯಾಗಿರುವುದು ಖುಷಿಯ ವಿಚಾರವಾಗಿದೆ. ನಿಮ್ಮ ಉತ್ತಮ ಸೇವೆಯ ಮೂಲಕ ಗ್ರಾಮದ ಹೆಸರನ್ನು ದೇಶದ ಭೂಪಟದಲ್ಲಿ ಮೂಡುವಂತೆ ಮಾಡಬೇಕೆಂದು ಸೋಮಯ್ಯ ಮಠದ ಸ್ವಾಮೀಜಿ ಯುವ ಸೈನಿಕರಿಗೆ ಹೇಳಿದರು.

ತಾಲೂಕಿನ ಕೃಷ್ಣಾ ತೀರದ ತಮದಡ್ಡಿ ಗ್ರಾಮದ ಚಂದ್ರಗಿರಿದೇವಿ ಹಾಗೂ ಗಂಗಾಧರ ಮಠದಲ್ಲಿ ಭಾನುವಾರ ಸಂಜೆ ಶ್ರೀಮಠದ ಗುರುಗಳಾದ ಸೋಮಯ್ಯ ಶ್ರೀಗಳು ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಮೂವರು ಯುವಸೈನಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ರೈತನ ಮಕ್ಕಳು ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸೈನಿಕ ಸೇವೆಯ ಮೂಲಕ ಭಾರತಮಾತೆ ಉತ್ತಮ ಸೇವೆಯ ಅವಕಾಶ ಲಭಿಸಿದ್ದು, ಗಡಿಕಾಯುವ ಕಾರ್ಯಕ್ಕೆ ತೆರಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಇದೇ ವೇಳೆ ಅಗ್ನಿವೀರ ಸೈನ್ಯಕ್ಕೆ ಆಯ್ಕೆಯಾದ ಗ್ರಾಮದ ಅಭಿಷೇಕ ಸೂರಗೊಂಡ, ವಿನಾಯಕ ಹುದ್ದಾರ, ಪ್ರದೀಪ ಪಾಟೀಲ ಅವರನ್ನು ಸೋಮಯ್ಯ ಶ್ರೀ ಹಾಗೂ ಗ್ರಾಮದ ಹಿರಿಯರು ಸನ್ಮಾನಿಸಿದರು.

ಗಂಗಯ್ಯ ಸ್ವಾಮಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಲಕ್ಷ್ಮಣ ಯಾದವಾಡ ಹಾಗೂ ಪದಾಧಿಕಾರಿಗಳು, ಗ್ರಾಮದ ದಾನಯ್ಯ ಮಠಪತಿ, ಸಿದ್ದು ಹುದ್ದಾರ, ಜಗದೀಶ ಝಾರಿ, ಗಂಗಪ್ಪ ಅಕ್ಕಿವಾಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net