ಸೊಸೆ ಸಾವಿನ ಆಘಾತದಿಂದ ಅತ್ತೆಯೂ ಮರಣ

Atte savu
Published on

ನರಗುಂದ: ಸೊಸೆ ಮೃತಪಟ್ಟು ಒಂದು ದಿನದ ಸೂತಕ ಕಳೆಯುವಷ್ಟರಲ್ಲಿ ಅತ್ತೆಯೂ ಮೃತಪಟ್ಟ ಮನಕಲಕುವ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ. ಪಟ್ಟಣದ ವಿನಾಯಕನಗರ ಬಡಾವಣೆ ನಿವಾಸಿ ಮಹಾದೇವಿ ಮಲ್ಲಿಕಾರ್ಜುನ ಬುದ್ನಿ (85) ಮೃತಪಟ್ಟವರು.

ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಈಕೆಯ ಸೊಸೆ ಪಾರ್ವತಿ ಚನ್ನಪ್ಪ ಬುದ್ನಿ (44) ಬುಧವಾರ ಮೃತಪಟ್ಟಿದ್ದರು. ಸೊಸೆಯ ಸಾವಿನ ಸುದ್ದಿ ಕೇಳಿ ಮಹಾದೇವಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಏತನ್ಮಧ್ಯೆ 13 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪಾರ್ವತಿಯ ಮಗಳಿಗೆ ವಾರದಲ್ಲಿ ಎರಡು ದಿನ ಡಯಾಲಿಸಿಸ್ ಮಾಡಿಸಬೇಕಿರುವುದರಿಂದ ತಾಯಿ ಸತ್ತ ಸೂತಕದ ನಡುವೆಯೂ ಗುರುವಾರ ಈಕೆಯನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಿಂದ ಮನೆಗೆ ಮರಳುವಷ್ಟರಲ್ಲಿ ಅಜ್ಜಿ ಮಹಾದೇವಿ ಮೃತಪಟ್ಟಿದ್ದು, ಕುಟುಂಬಸ್ಥರು, ಸಂಬಂಧಿಕರಿಗೆ ಆಘಾತವನ್ನುಂಟು ಮಾಡಿದೆ.

ಮೃತ ಮಹಾದೇವಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net