ತಾಯಿಗೆ ಸಮಾನವಸ್ತು ಇನ್ನೊಂದಿಲ್ಲ

TLK 8-1
ತಾಳಿಕೋಟೆ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಹಿರೇಆಸಂಗಿ ಹಿರೇಮಠದ ಶ್ರೀವೀರಬಸವ ದೇವರು ಮಾತನಾಡಿದರು. ಜೆ.ಸಿ.ಹಿರೇಮಠ, ಜ್ಯೋತಿ ಹಿರೇಮಠ, ಕಾಶಿನಾಥ ಮುರಾಳ, ಜಿ.ಎನ್.ಪಾಟೀಲ ಇದ್ದರು.
Published on

ತಾಳಿಕೋಟೆ: ಜಗತ್ತಿನಲ್ಲಿ ತಾಯಿಗೆ ಸಮಾನವಾದ ವಸ್ತು ಇನ್ನೊಂದಿಲ್ಲ. ತಾಯಿಯ ಋಣ ತೀರಿಸಲು ಏಳು ಜನ್ಮಗಳು ಸಾಕಾಗುವುದಿಲ್ಲ ಎಂದು ಹಿರೇಆಸಂಗಿ ಹಿರೇಮಠದ ಶ್ರೀ ವೀರಬಸವ ದೇವರು ಹೇಳಿದರು.

ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ವೀರಶೈವ ವಿದ್ಯಾವರ್ದಕ ಸಂಘದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರ ಜೀವನಕ್ಕೆ ತಾಯಿ ಸ್ಫೂರ್ತಿಯಾಗಿದ್ದಾಳೆ. ತಾಯಿಯ ತ್ಯಾಗಮಯ ಜೀವನ ವಿಶ್ವಕ್ಕೆ ಮಾದರಿ ಎಂದರು.

ಅಕ್ಕ ನಾಗಮ್ಮ, ಜೀಜಾಬಾಯಿ ಅವರ ಸ್ಫೂರ್ತಿಯಿಂದ ಬಸವಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಶ್ರೇಷ್ಠ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದರು.

ವೀ.ವಿ.ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ನಿರ್ದೇಶಕ ಜಿ.ಎನ್.ಪಾಟೀಲ, ಪ್ರಾಚಾರ್ಯೆ ಜೆ.ಸಿ.ಹಿರೇಮಠ ಮಾತನಾಡಿದರು.

ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತೆ ಪ್ರಾಚಾರ್ಯೆ ಜ್ಯೋತಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ, ವೀ.ವಿ.ಎಸ್.ಮಹಿಳಾ ಪ.ಪೂ.ಕಾಲೇಜ್ ಅಧ್ಯಕ್ಷ ಕೆ.ಸಿ.ಸಜ್ಜನ, ವಿದ್ಯಾರ್ಥಿನಿಯರ ಪ್ರತಿನಿಧಿ ಮಮತಾಜ ವಾಲಿಕಾರ ಉಪಸ್ಥಿತರಿದ್ದರು. ಎಸ್.ಬಿ.ಕುಲಕರ್ಣಿ ಸ್ವಾಗತಿಸಿದರು. ಬಿ.ಬಿ.ಅಂಬಿಗೇರ ವಂದಿಸಿದರು. ಎಸ್.ಎಸ್.ಸಜ್ಜನ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net