ಸಕಲ ಚರಾಚರಗಳಿಗೂ ಆಶ್ರಯದಾತೆ ಗಂಗಾಮಾತೆ

06 LXR 7
Published on

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗಂಗಾಮತ ಸಮಾಜವರಿಂದ ಗುರುವಾರ ಗಂಗಾಮಾತಾ ಜಯಂತ್ಯುತ್ಸವ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆ ಪಟ್ಟಣದ ಪುರಸಭೆ ಹತ್ತಿರದ ಸುಣಗಾರ ಓಣಿಯ ಗಂಗಾದೇವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಬಳಿಕ ಗಂಗಾದೇವಿ ಭಾವಚಿತ್ರದ ಮೆರವಣಿಗೆ, ಪೂರ್ಣಕುಂಭ ಮತ್ತು ವಾದಗಳ ಸಮೇತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೆರವೇರಿತು.

ಗಂಗಾದೇವಿಯ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಭಗೀರಥನ ತಪಸ್ಸಿಗೆ ಮೆಚ್ಚಿದ ಗಂಗಾಮಾತೆ ಭೂಲೋಕದ ಸಕಲ ಚರಾಚರಗಳಿಗೂ ಆಶ್ರಯದಾತೆ ಮತ್ತು ಸಕಲ ಜೀವರಾಶಿಗಳಿಗೆ ಉಸಿರಾದ ದಿನವೆಂದು ಗಂಗಾಮಾತಾ ಜಯಂತಿ ಆಚರಿಸಲಾಗುತ್ತದೆ. ಪವಿತ್ರ ಗಂಗಾಮಾತೆ ಜೀವಿಗಳಿಗೆ ಜೀವಜಲ, ಪಾಪ-ಕರ್ಮ ಕಲ್ಮಶಗಳನ್ನೆಲ್ಲ ತೊಳೆದುಹಾಕಿ ಮೋಕ್ಷ ಕರುಣಿಸುವ ಮಹಾತಾಯಿಯಾಗಿದ್ದಾಳೆ. ಗಂಗಾಮತ ಸಮಾಜ ಚಿಕ್ಕದಾದರೂ ಕಾಯಕ ನಿಷ್ಠೆ, ಧರ್ಮಮಾರ್ಗದ ಮೂಲಕ ಇತರ ಸಮಾಜದೊಂದಿಗೆ ಅನೋನ್ಯವಾಗಿ ಬದುಕುತ್ತಿದೆ ಎಂದರು.

ಶಿವಯೋಗಿ ಅಂಕಲಕೋಟಿ, ಸಮಾಜದ ಅಧ್ಯಕ್ಷ ಬರಮಪ್ಪ ಕಟ್ಟಿಮನಿ, ಮಹಾದೇವಪ್ಪ ಕಟ್ಟಿಮನಿ, ಸೋಮಪ್ಪ ಸುಣಗಾರ, ಗಂಗಾಧರ ತಂಡಿಗೇರ, ಮಹಾಂತೇಶ ಶಿಗ್ಲಿ, ಬಾಲೇಹೊಸೂರಿನ ಗುಡದಯ್ಯ ಬಾರಕಿ, ಮಹಾಂತೇಶ ಸುಣಗಾರ, ಹನುಮಂತಪ್ಪ ಸುಣಗಾರ, ಮಾಲತೇಶ ತಂಡಿಗೇರ, ಕಿರಣ್ ಕಟ್ಟಿಮನಿ, ಆಕಾಶ ಸವದತ್ತಿ, ಪುಟ್ಟಪ್ಪ ಹೊಸೂರಿ, ಯಲ್ಲಪ್ಪ ಜಾಲಗಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net