ತಾಯಿಹಾಲಿನಿಂದ ಆರೋಗ್ಯ ವೃದ್ಧಿ

milk
Published on

ಕೂಡ್ಲಿಗಿ: ಶಿಶುಗಳಿಗೆ ಆರಂಭದಿಂದಲೇ ಉಪಯುಕ್ತವಾದ ಆಹಾರವನ್ನು ಉಣಬಡಿಸುವ ವಿಚಾರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಪೋಷಕಾಂಶ ದಿನ ಆಚರಣೆ ಮಾಡಲಾಗುತ್ತಿದ್ದೆ ಎಂದು ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯಾಧಿಕಾರಿ ನಿರಂಜನ ಹೇಳಿದರು.

ಪೋಷಕಾಂಶ ದಿನಾಚರಣೆ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪೋಷಕಾಂಶ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾನಾಡಿದರು.

ಜಾಗತಿಕ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಮಕ್ಕಳಿಗೆ ಬಾಲ್ಯದಲ್ಲಿಯೇ ಸಮರ್ಪಕವಾದ ಪೌಷ್ಟಿಕಾಂಶ ಯುಕ್ತ ಆಹಾರ ನೀಡುವುದರಿಂದ ಜೀವನ ಪರ್ಯಂತ ಆರೋಗ್ಯ ಮತ್ತು ಸುಖೀಜೀವನಕ್ಕೆ ಅನುಕೂಲವಾಗಲಿದೆ. ಶಿಶುಗಳು ಸರಿಯಾದ ಬೆಳವಣಿಗೆ, ಅಭಿವೃದ್ಧಿ ಮತ್ತು ಆರೋಗ್ಯಹೊಂದಲು ಮೊದಲ ಆರು ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ತಾಯಿಹಾಲು ಉಣ್ಣಿಸಬೇಕು.

ಶಿಶುವಿನ ಬೆಳವಣಿಗೆ, ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನು ತಾಯಿ ಹಾಲು ಸರಿಯಾದ ಪ್ರಮಾಣಗಳಲ್ಲಿ ಒಳಗೊಂಡಿರುತ್ತದೆ. ಇನ್ನಿತರ ಯಾವುದೇ ಹಾಲುಗಳಲ್ಲಿ ಇಲ್ಲದ ಸೋಂಕು ನಿರೋಧಕ ಗುಣಗಳು ತಾಯಿ ಹಾಲಿನಲ್ಲಿವೆ. ಮಕ್ಕಳಿಗೆ ಪೌಷ್ಟಿಕ ಆಹಾರಗಳಾದ ಹಣ್ಣು, ಹಸಿರು ತರಕಾರಿ ಹಾಗೂ ಬೇಳೆಕಾಳು ನೀಡಬೇಕು ಇದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿ ಯಾಗುತ್ತದೆ ಎಂದರು.


ಆಸ್ಪತ್ರೆ ಅಧೀಕ್ಷಕ ಕೆ.ಬಿ.ಎಂ.ವೀರಭದ್ರಯ್ಯ, ಆಸ್ಪತ್ರೆ ಸಿಬ್ಬಂದಿ ಮಲ್ಲಿಕಾರ್ಜುನ, ಅರುಣಾ, ರೇಖಾ, ಜ್ಞಾನೇಶ್ವರಿ, ಅನ್ನಪೂರ್ಣ, ಲತಾ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net