

ಕಲಾದಗಿ: ಮಹಿಳೆಯೊಬ್ಬಳು ತನ್ನ 2 ವರ್ಷದ ಮಗಳೊಂದಿಗೆ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳು ಆದ್ಯಳನ್ನು ಹೊತ್ತುಕೊಂಡು ಸರಸ್ವತಿ ಮಂ.ರಾಯಭಾಗ (22) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ತನ್ನ ತವರೂರು ಕಲಾದಗಿಗೆ ಹೋಗುವುದಾಗಿ ಹೇಳಿ ಮಾ.1ರಂದೇ ರಾಮದುರ್ಗದಲ್ಲಿರುವ ಗಂಡನ ಮನೆಯಿಂದ ಬಂದಿದ್ದ ಸರಸ್ವತಿ ಅಂದೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಸೋಮವಾರ ಬೆಳಗ್ಗೆ ಹೆಣವಾಗಿ ಪತ್ತೆಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಡಿವೈಎಸ್‌ಪಿ ಸುಕಾರಾಂ ಸುತಾರ, ಸಿಪಿಐ ಎಚ್.ಆರ್.ಪಾಟೀಲ ಸ್ಥಳಕ್ಕೆ ಭೇಟಿ ನೀಡಿದರು. ಗಂಡು ಮಗುವಾಗಲಿಲ್ಲ ಎಂಬ ಕೊರಗಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಹಿಳೆಯ ತಾಯಿ ದೂರು ನೀಡಿದ್ದು, ಸ್ಥಳೀಯ ಠಾಣಾಧಿಕಾರಿ ಚಂದ್ರಶೇಖರ ಹೆರಕಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.