

ಮುಳಬಾಗಿಲು : ತಾಲೂಕಿನ ಹನುಮನಹಳ್ಳಿ ಕ್ರಾಸ್ನಲ್ಲಿರುವ ಸಿಮೆಂಟ್ ಹಾಲೋ ಬ್ಲಾಕ್ ಪ್ಯಾಕ್ಟರಿಯೊಂದರಲ್ಲಿ 7 ವರ್ಷದಿಂದ ಗೃಹ ಬಂಧನದಲ್ಲಿದ್ದ ತಾಯಿ ಮತ್ತು ಮಗಳನ್ನು ತಹಸೀಲ್ದಾರ್ ವಿ.ಗೀತಾ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಶುಕ್ರವಾರ
ರಕ್ಷಣೆ ಮಾಡಿದ್ದಾರೆ.
ಕೆಲಸ ಅರಸಿ ಬಂದಿದ್ದ ದಂಪತಿಯನ್ನು ಪ್ಯಾಕ್ಟರಿ ಮಾಲೀಕ ಸದ್ದಾಂ ಹುಸೇನ್ ಎಂಬಾತ ಬರೋಬ್ಬರಿ 7 ವರ್ಷದಿಂದ ಜೀತಕ್ಕೆ ಇರಿಸಿಕೊಂಡಿದ್ದ ಎನ್ನಲಾಗಿದೆ. ಸ್ಥಳಿಯರು ನೀಡಿದ ದೂರಿನ ಮೇರೆಗೆ ಮುಳಬಾಗಿಲು ತಹಸೀಲ್ದಾರ್ ಮತ್ತು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ದಾಳಿ ಮಾಡಿ
ರಕ್ಷಣೆ ಮಾಡಿದ್ದಾರೆ. ಗೌರಿಬಿದನೂರು ತಾಲೂಕು ಹೊಮ್ಮಶೆಟ್ಟಿಹಳ್ಳಿಯ ಪ್ರಶಾಂತ್, ವಿ.ಕೋಟೆಯ ಯರನಾಗನಹಳ್ಳಿಯ ವಿನುತಾ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಹೆಣ್ಣು ಮಗು ಇತ್ತು. ಆದರೆ ಇತ್ತೀಚೆಗೆ ಪ್ರಶಾಂತ್, ಪತ್ನಿ ಮತ್ತು ಮಗಳನ್ನು ಬಿಟ್ಟು ಪರಾರಿಯಾಗಿದ್ದ ಎನ್ನಲಾಗಿದೆ.