ಜಿಗುಪ್ಸೆಗೊಳಗಾಗಿ ತಾಯಿ-ಮಗಳು ಆತ್ಮಹತ್ಯೆ.

IMG-20240213-WA0016
Published on

ಕಲಬುರಗಿ: ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ ಮತ್ತು ಮಗಳು ಜಿಲ್ಲೆಯ ಶಹಾಬಾದ್ ಬಳಿಯ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾಯಿ ಸುಮಲತಾ (೪೫), ಹಾಗೂ ಮಗಳು ವರ್ಷಾ (೨೨) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು ಕಲಬುರಗಿಯ ಎಂ.ಬಿ.ನಗರ ಬಡಾವಣೆಯ ನಿವಾಸಿಗಳಾಗಿದ್ದಾರೆ.

ಸೋಮವಾರ ಸಾಯಂಕಾಲದಿಂದ ನಾಪತ್ತೆಯಾಗಿದ್ದು, ರಾತ್ರಿ ಕಾಗಿಣಾ ನದಿಗೆ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಶಹಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net