ತಾಯಿ, ಮಗು ಅರೋಗ್ಯ ಜಾಗೃತಿ ಆಂದೋಲನ

26
Published on

ಮೈಸೂರು: ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಸೇಟ್ ಮೋಹನ್‌ದಾಸ್ ತುಳಸಿ ದಾಸಪ್ಪ (ಎಸ್‌ಎಂಟಿ) ಆಸ್ಪತ್ರೆಯಲ್ಲಿ ಬುಧವಾರ ತಾಯಿಯಿಂದ ಮಗುವಿಗೆ ಎಚ್‌ಐವಿ, ಸಿಫಿಲೀಸ್ ಮತ್ತು ಹೆಪಟೈಟಿಸ್ ಹರಡುವಿಕೆ ತಡೆಗಟ್ಟುವ ಜಾಗೃತಿ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ತಾಲೂಕು ಅರೋಗ್ಯ ಅಧಿಕಾರಿಗಳ ಕಾರ್ಯಾಲಯ, ಎಸ್‌ಎಂಟಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಹಯೋಗದಲ್ಲಿ ಅರೋಗ್ಯ ಇಲಾಖೆ ಆಂದೋಲನ ಹಮ್ಮಿಕೊಂಡಿತ್ತು.
ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ, ಎಚ್‌ಐವಿ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಗರ್ಭಿಣಿಯರು ತಪ್ಪದೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಮೂಲಕ ಎಚ್‌ಐವಿ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ಆರ್‌ಸಿಒ ಅಧಿಕಾರಿ ಡಾ. ಜಯರಾಮ್, ಡ್ಯಾಪ್ರೋ ಅಧಿಕಾರಿ ಡಾ. ಸಿರಾಜ್ ಅಹಮದ್, ಎಸ್‌ಎಂಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅನುರಾಧಾ, ಡಾ.ಸುಚಿತ್ರಾ, ಸಮಾಲೋಚಕಾರದ ಹರಿಣಿ, ಟೆಕ್ನೀಷಿಯನ್ ಶಬೀಸ್ತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net