ಬುಲೇರೋದಲ್ಲಿ ಬಂದು 10 ಕುರಿ ಕದ್ದ ಖದೀಮರು

Crime Logo
Published on

ಬ್ಯಾಡಗಿ: ಬುಲೇರೋ ವಾಹನದಲ್ಲಿ ಬಂದ ಗುಂಪೊಂದು 1.30 ಲಕ್ಷ ರೂ. ಮೌಲ್ಯದ 10 ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ವಿಜಯ ಬಸವರಾಜ ಬಳ್ಳಾರಿ (39) ಎಂಬುವರ ಕುರಿ ಕಳ್ಳತನವಾಗಿರುವುದು.

ಇವರ ಕುರಿ ಸಾಕಾಣಿಕೆ ಮನೆಯ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು 1.30 ಲಕ್ಷ ರೂ. ಮೌಲ್ಯದ 10 ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net