ಕಳಸದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್

kls1 (2)
Published on

ಕಳಸ: ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ, ಕಾಶ್ಮೀರದಲ್ಲಿ ಹಿಂದುಗಳ ಮೇಲಿನ ಹಲ್ಲೆ ಹಾಗೂ ಮಂಗಳೂರಲ್ಲಿ ಹಿಂದು ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಕಳಸ ಸ್ವಯಂ ಪ್ರೇರಿತ ಬಂದ್ ಆಚರಿಸಲಾಯಿತು. ಪ್ರತಿಭಟನೆ ಹಿನ್ನಲೆಯಲ್ಲಿ ಕಳಸದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಕಳಸ ಆಂಜನೇಯ ದೇವಸ್ಥಾನದಿಂದ ಕಲಶೇಶ್ವರ ದೇವಸ್ಥಾನದವರಗೆ ಮೆರವಣಿಗೆ ನಡೆಸಲಾಯಿತು.

ಜರಂಗದಳ ಜಿಲ್ಲಾ ಸಂಯೋಜಕ ಅಜಿತ್ ಕುಲಾಲ್ ಮಾತನಾಡಿ , ಸುಹಾಸ್ ಶೆಟ್ಟಿ ಕೊಲೆಗೆ ಕಳಸ ಇಬ್ಬರು ಹಿಂದು ಯುವಕರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಕೊಲೆ ಆರೋಪಿಯಾದ ನಿಯಾಜ್ ಈ ಹಿಂದೆ ಕಳಸದಲ್ಲಿ ಲವ್‌ಜಿಹಾದ್ ಮಾಡಿದ್ದ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅಂದೇ ಅವನ ಮೇಲೆ ಕ್ರಮಕೈಗೊಂಡಿದ್ದರೆ ಇಂದು ಸುಹಾಸ್‌ಶೆಟ್ಟಿ ಕೊಲೆಯಾಗುತ್ತಿರಲಿಲ್ಲ.

ನಿಯಾಜ್ ಕಳೆದ ಕೆಲ ದಿನಗಳ ಹಿಂದೆ ಕಳಸದ ಹೋಂ ಸ್ಟೇ ಒಂದರಲ್ಲಿ ಪಾರ್ಟಿ ಮಾಡಿ ಈ ಹಿಂದು ಯುವಕರಿಗೆ ಡ್ರಗ್ಸ್ ನೀಡಿ ಅವರಿಗೆ ಹಿಂದು ಸಂಘಟನೆ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಮನಸ್ಥಿತಿ ಮೂಡಿಸಿ ಮೂಡಿಸಿ ಕೊಲೆಗೆ ಸಂಚು ರೂಪಿಸಲಾಗಿದೆ. ಇಲ್ಲಿನವರಿಗೆ ಮಂಗಳೂರಿನಿಂದ ಬಂದು ಅಕ್ರಮ ಗೋ ಸಾಗಟ ಮಾಡುವವರಿಗೆ ಡ್ರಗ್ಸ್ ಮಾರುವವರ ಬಗ್ಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಮಂಗಳೂರಿನಿಂದ ಬಂದು ಮಟ್ಕಾ, ಲವ್ ಜಿಹಾದ್, ಡ್ರಗ್ಸ್ ಮಾರಾಟಮಾಡೋಕೆ ಬರುತ್ತಿದ್ದಾರೆ, ಅದನ್ನು ತಡೆಯುವ ಕೆಲಸ ಪೊಲೀಸರು ಮಾಡಬೇಕು ಎಂದು ಹೇಳಿದರು.

ವಿಹಿಂಪ ಕಳಸ ತಾಲೂಕು ಅಧ್ಯಕ್ಷ ಬಾಲಕೃಷ್ಣ ಪ್ರಭು, ಸಂಯೋಜಕ ಸುಜಿಲ್, ಗೋರಕ್ಷಕ ಪ್ರಮುಖ್ ದೀಕ್ಷಿತ್, ಕಾರ್ಯದರ್ಶಿ ಸಂತೋಷ್ ಮೂಲ್ಯ, ಧರ್ಮದರ್ಶಕ ಪ್ರಮುಖ್ ಜಗದೀಶ್ ಭಟ್, ಸುರಕ್ಷಾ ಪ್ರಮುಖ್ ಮಂಜುನಾಥ್, ಶ್ರೀಕಾಂತ್, ಬಿ.ಕೆ.ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net