ತುಂಬೆ ಕೊಳವೆ ದುರಸ್ತಿಕಾರ್ಯ ಪೂರ್ಣ, ತುಂಬೆ ರೇಚಕಸ್ಥಾವರದಿಂದ ನೀರಿನ ಪೂರೈಕೆ ಸರಾಗ, ತುಂಬೆಯಲ್ಲಿ ರಾ.ಹೆ. ಏಕಮುಖ ಸಮಚಾರದಿಂದ ಅಪಘಾತ

mng-aug2-tumbe1
ತುಂಬೆಯಿಂದ ನಗರಕ್ಕೆ ನೀರು ಪೂರೈಸುವ 1100 ಮಿ.ಮೀ ವ್ಯಾಸದ ಬೃಹತ್ ಕೊಳವೆಗೆ ಹಾನಿಯಾಗಿದ್ದು, ದುರಸ್ತಿ ಕಾರ್ಯ ಶುಕ್ರವಾರ ಮಧ್ಯಾಹ್ನ ವೇಳೆ ಪೂರ್ಣಗೊಂಡಿದೆ.
Published on

ಮಂಗಳೂರು: ತುಂಬೆಯಿಂದ ನಗರಕ್ಕೆ ನೀರು ಪೂರೈಸುವ 1100 ಮಿ.ಮೀ ವ್ಯಾಸದ ಬೃಹತ್ ಕೊಳವೆಗೆ ಹಾನಿಯಾಗಿದ್ದು, ದುರಸ್ತಿ ಕಾರ್ಯ ಶುಕ್ರವಾರ ಮಧ್ಯಾಹ್ನ ವೇಳೆ ಪೂರ್ಣಗೊಂಡಿದೆ.
 ತುಂಬೆಯಿಂದ ನಗರಕ್ಕೆ ನೀರು ಪೂರೈಸುವ 1100 ಮಿ.ಮೀ ವ್ಯಾಸದ ಬೃಹತ್ ಕೊಳವೆಗೆ ಹಾನಿಯಾಗಿದ್ದೇ ಹೊರತು, 18 ಎಂಎಲ್‌ಡಿ ನೀರು ಸರಬರಾಜು ಕೊಳವೆ ಯಥಾಸ್ಥಿತಿಯಲ್ಲಿದ್ದುದರಿಂದ ಬಹುತೇಕ ಕಡೆ ನೀರು ಪೂರೈಕೆಗೆ ತೊಂದರೆಯಾಗಿಲ್ಲ. ಶುಕ್ರವಾರ ಮಧ್ಯಾಹ್ನದ ವೇಳೆ ತುಂಬೆ ರೇಚಕ ಸ್ಥಾವರದಿಂದ ಇಡೀ ನಗರಕ್ಕೆ 30 ನಿಮಿಷ ನೀರು ಪೂರೈಕೆ ಸ್ಥಗಿತವಾಗಿದ್ದು, ಹಾನಿಗೊಳಗಾದ ಪೈಪ್‌ನ್ನು ದುರಸ್ತಿಗೊಳಿಸಿದ ಬಳಿಕ ಪಾಲಿಕೆ ಇಂಜಿನಿಯರ್‌ಗಳು ತಾಂತ್ರಿಕವಾಗಿ ಪರಿಶೀಲಿಸಿದರು. ನಂತರ ನೀರು ಪೂರೈಕೆಗೆ ಅನುಮತಿಸಲಾಯಿತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ನಂತರ ಮಂಗಳಾದೇವಿ, ಪಾಂಡೇಶ್ವರ, ಕಣ್ಣೂರು, ಪಡೀಲ್, ಬಿಕಾರನಕಟ್ಟೆ, ಕುಡುಪು, ವಾಮಂಜೂರು, ವೆಲೆನ್ಸಿಯಾ, ಕಂಕನಾಡಿ, ಹೊಯ್ಗಬಜಾರ್, ಬೋಳಾರ, ಜೆಪ್ಪಿಮಾಮೊಗರು,ರ್, ಜೆಪ್ಪು, ಅತ್ತಾವರ, ಸ್ಟೇಟ್‌ಬ್ಯಾಂಕ್, ಪಡೀಲ್, ನಾಗೋರಿ, ಚಿಲಿಂಬಿ, ಲೇಡಿಹಿಲ್ ಮುಂತಾದ ಪ್ರದೇಶಗಳಿಗೆ ಎಂದಿನಂತೆ ನೀರು ಪೂರೈಕೆ ಮಾಡಲಾಗಿದೆ.
 *ಏಕಮುಖ ಸಮಚಾರದಿಂದ ಅಪಘಾತ
 ಬುಧವಾರ ಬೆಳಗ್ಗಿನಿಂದ ತುಂಬೆ ಬಳಿ ಹಾನಿಗೊಳಗಾದ ಪೈಪ್‌ನ ಸುತ್ತಲಿನ ಮಣ್ಣು ತೆರವು ಕಾರ್ಯ ಆರಂಭಗೊಂಡಿರುವುದು ಮಾತ್ರವಲ್ಲದೆ ಕಾಮಗಾರಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಒಂದು ರಸ್ತೆಯ ಸಂಚಾರ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಹಾನಿಗೊಳಗಾದ ಪೈಪ್‌ನ್ನು ಸರಿಪಡಿಸಿ ಮಣ್ಣು ಮುಚ್ಚಲಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಸಂಚಾರ ಏಕಮುಖವಾಗಿತ್ತು. ಕಾಮಗಾರಿ ಪೂರ್ಣಗೊಳ್ಳುವ ಸಂದರ್ಭ ಏಕಮುಖ ರಸ್ತೆಯ ಬಸ್ ಕಾರು ಅಪಘಾತವಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ಹಾಗು ಕಾರು ಜಖಂಗೊಂಡಿದೆ. ನಾನ್‌ಸ್ಟಾಪ್ ರೀತಿಯಲ್ಲಿ ದುರಸ್ತಿ ಕಾರ್ಯ ನಡೆದಿದ್ದು, ದುರಸ್ತಿ ಕಾರ್ಯದ ಎಲ್ಲಾ ಖರ್ಚುವೆಚ್ಚಗಳನ್ನು  ಗೇಲ್ ಇಂಡಿಯಾ ಸಂಸ್ಥೆಯಿಂದಲೇ ಬರಿಸಲಾಗಿದೆ.
 ---------------
 ಅಧಿಕಾರಿಗಳಿಂದ ತಾಂತ್ರಿಕ ಸಲಹೆ
 ನಗರದಾಧ್ಯಂತ ಅಲ್ಲಲ್ಲಿ ಗೇಲ್ ಇಂಡಿಯಾ ಸಂಸ್ಥೆಯಿಂದ ಗ್ಯಾಸ್ ಲೈನ್ ಸಂಪರ್ಕದ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ನಗರದ ಪಡೀಲ್ ಬಳಿ 1100 ಮೀ.ಮೀ ವ್ಯಾಸದ ಬೃಹತ್ ಕೊಳವೆಗೆ ಹಾನಿಯುಂಟಾಗಿದೆ. ಹಾನಿಗೊಳಗಾದ ಕೊಳವೆ ದುರಸ್ತಿಗೆ ಪಾಲಿಕೆ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕಾಮಗಾರಿ ವೇಳೆ ತಾಂತ್ರಿಕ ಸಲಹೆ ನೀಡಿದ್ದರು. ಕೊಳವೆಗೆ ಹಾನಿಯುಂಟು ಮಾಡಿದ ಗೇಲ್ ಇಂಡಿಯಾ ಸಂಸ್ಥೆಗೆ ಮಂಗಳೂರು ಮಹಾನಗರ ಪಾಲಿಕೆಯಿಂದ 5.5ಲಕ್ಷ ರೂ. ದಂಡ ವಿಧಿಸಲಾಗಿದೆ
 ---------------
 ಕಳೆದ 3 ದಿನಗಳಿಂದ ಹಾನಿಗೊಳಗಾದ 1100 ಮಿ.ಮೀ ವ್ಯಾಸದ ಬೃಹತ್ ಕೊಳವೆಯ ದುರಸ್ತಿ ಕಾರ್ಯ ನಿರಂತರ ನಡೆಸಲಾಗಿತ್ತು. ಈ ದುರಸ್ತಿಯ ಸಂಪೂರ್ಣ ವೆಚ್ಚ ಗೇಲ್ ಇಂಡಿಯಾ ಸಂಸ್ಥೆಯಿಂದಲೇ ವಸೂಲಿ ಮಾಡಲಾಗುತ್ತದೆ. ಕೊಳವೆ ದುರಸ್ತಿ ಹಿನ್ನೆಲೆಯಲ್ಲಿ ಈಭಾಗದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಶುಕ್ರವಾರ ಪೂರ್ಣ ಪ್ರಮಾಣದಲ್ಲಿ ದುರಸ್ತಿ ಕಾರ್ಯ ಮುಕ್ತಾಯಗೊಂಡಿದೆ.
 ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net