ತುಮರಿಕೊಪ್ಪದಲ್ಲಿ ಸೊಳ್ಳೆಗಳ ಕಾಟ ಹೆಚ್ಚಳ

12 Hanumasagara 1A.
ತುಮರಿಕೊಪ್ಪ ಗ್ರಾಮದ ಮುಖ್ಯ ರಸ್ತೆ ಬಳಿ ಇರುವ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿರುವುದು.
Published on

ಹನುಮಸಾಗರ: ಸಮೀಪದ ತುಮರಿಕೊಪ್ಪ ಗ್ರಾಮದ ಚರಂಡಿಯಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ತುಂಬಿದ್ದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ದುರ್ವಾಸನೆ ಬೀರುತ್ತಿದೆ.

ಸುಮಾರು 2500 ಜನಸಂಖ್ಯೆ ಹೊಂದಿರುವ ತುಮರಿಕೊಪ್ಪ ಗ್ರಾಪಂ ಕೇಂದ್ರ ಸ್ಥಾನವಾಗಿದೆ. 4 ಜನ ಸದಸ್ಯರಿದ್ದು, ಅದೇ ಗ್ರಾಮದವರು ಅಧ್ಯಕ್ಷರಿದ್ದಾರೆ. ಆದರೂ, ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಮನೆಗಳಿಂದ ಬಂದ ನೀರು ಚರಂಡಿಗಳಲ್ಲಿ ಸಂಗ್ರಹವಾಗಿದ್ದು, ಸರಾಗವಾಗಿ ನೀರು ಹರಿಯದೆ ಮಡುಗಟ್ಟಿ ನಿಂತಿದೆ.

ಜತೆಗೆ ಪಾಚಿಕಟ್ಟಿದ್ದು ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ. ಗ್ರಾಮಸ್ಥರು ಸೊಳ್ಳೆಗಳ ಕಾಟದ ಜತೆಗೆ ದುರ್ವಾಸನೆ ನಡುವೆ ಕಾಲ ದೂಡುತ್ತಿದ್ದು, ವಿವಿಧ ಕಾಯಿಲೆಗಳು ಹರಡುವ ಭೀತಿಯಲ್ಲಿ ಎದುರಿಸುವಂತಾಗಿದೆ.

ತುಮರಿಕೊಪ್ಪ ಗ್ರಾಪಂ ಪಿಡಿಒಅಮೀನಸಾಬ ಅಲಂದರ್ತುಮರಿಕೊಪ್ಪ ಗ್ರಾಮದ ಚರಂಡಿಯನ್ನು ಸ್ವಚ್ಛಗೊಳಿಸಲಾಗುವುದು. ಈಗಾಗಲೇ ಸ್ವಚ್ಛ ಮಾಡಲು ತಿಳಿಸಲಾಗಿದ್ದು, ಕೆಲಸಗಾರರು ಸಿಗದಿದಕ್ಕೆ ತಡವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net