

ಉಳ್ಳಾಲ: ಸಂಸ್ಕಾರ ಉಳಿಸುವ ಹೊಣೆಗಾರಿಕೆ ಜತೆಗೆ ತಮ್ಮ ಪಾಲಕರನ್ನೂ ಚೆನ್ನಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ ಎಂಬುದನ್ನು ಎಂದಿಗೂ ಮರೆಯಬಾರದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕ ಕೆ.ಟಿ.ಸುವರ್ಣ ಹೇಳಿದರು.
ನೆತ್ತಿಲಪದವು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಆಶ್ರಯದಲ್ಲಿ ಶನಿವಾರ ಆಯೋಜನೆಗೊಂಡ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ಕ್ಷೇತ್ರದ ಪಾತ್ರಿ ರಾಜ ಬೆಳ್ಚಪ್ಪಾಡ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಸಹಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಉಪನ್ಯಾಸ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದ ಶ್ರದ್ಧಾ ನಿತ್ಯಾನಂದ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಮಂಗಳೂರು ತಾಲೂಕು ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ನರಿಂಗಾನ ಯೇನೆಪೊಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮುಖ್ಯಅಧೀಕ್ಷಕ ಡಾ.ಸುಭಾಷ್ ರೈ, ಬಿಜೆಪಿ ಮುಖಂಡ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಪ್ರಮುಖರಾದ ನಳಿನಿ ಎ.ಕೆ., ಜಯಪ್ರಕಾಶ್ ಶೆಟ್ಟಿ ಭಂಡಾರಮನೆ, ಪ್ರಭಾಕರ ಶೆಟ್ಟಿ ಸಂಕೋಳಿಗೆ, ಮನೋಹರ ಶೆಟ್ಟಿ ಕೆದುಂಬಾಡಿ ಉಪಸ್ಥಿತರಿದ್ದರು.
ಪ್ರೇಮಾನಂದ ರೈ ನೆತ್ತಿಲಕೋಡಿ ಸ್ವಾಗತಿಸಿದರು. ಯತಿರಾಜ್ ಶೆಟ್ಟಿ ಬಹುಮಾನ ವಿಜೇತರ ಹೆಸರು ವಾಚಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.
ಪ್ರಪಂಚವು ಸಂಸ್ಕಾರ ತಿಳಿಯುವ ಮೊದಲೇ ಭಾರತ ಆಯುರ್ವೇದ ಮಹತ್ವದ ಕುರಿತು ವಿವರಿಸಿತ್ತು. ರಾಷ್ಟ್ರಗಳು ಪರಸ್ಪರ ಸಂವಹನ ಮಾಡಿಕೊಳ್ಳುವ ಮೊದಲೇ ಭಾರತದಲ್ಲಿ ವೇದ ಉಪನಿಷತ್ತುಗಳ ಬೋಧನೆಯಾಗಿತ್ತು.