

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಚೈತನ್ಯ ನಗರ ನಿವಾಸಿಗಳ ಸಂ ಹಾಗೂ ಸರಸ್ವತಿ ಮಹಿಳಾ ಮಂಡಳದ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸೆ. 7ರಂದು ಅಕ್ಷಯ ಪಾರ್ಕ್ ಎದುರಿನ ಸಂತೆ ಮೈದಾನದಲ್ಲಿ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸೆ. 6ರಂದು ಮಧ್ಯರಾತ್ರಿ 12ಕ್ಕೆ ಶ್ರೀಕೃಷ್ಣನನ್ನು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಸೆ. 7ರಂದು ಬೆಳಗ್ಗೆ 11.30ಕ್ಕೆ ಗಡಿಗೆ ಒಡೆಯುವ ಸ್ಪರ್ಧೆ ನಡೆಯಲಿದ್ದು, ಈಗಾಗಲೇ 15 ತಂಡಗಳು ನೋಂದಣಿ ಮಾಡಿಕೊಂಡಿವೆ. ಒಂದು ತಂಡದಲ್ಲಿ 11 ಜನರು ಇರುತ್ತಾರೆ. 25 ಅಡಿ ಎತ್ತರದಲ್ಲಿ ಗಡಿಗೆ ಕಟ್ಟಲಾಗಿರುತ್ತದೆ. ಸ್ಪರ್ಧಾಳುಗಳು ಭಾಗವಹಿಸಿ ಚತುರತೆ ಪ್ರದಶಿರ್ಸಬಹುದು. ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದರು.
ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ವಿವಿಧ ವೇಷಭೂಷಣ ಸ್ಪರ್ಧೆ, ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮೇಯರ್ ವೀಣಾ ಬರದ್ವಾಡ, ಡಾ. ಮಹೇಶ ನಾಲವಾಡ, ಸುಭಾಸಸಿಂಗ್ ಜಮಾದಾರ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಸಕ ಮಹೇಶ ಟೆಂಗಿನಕಾಯಿ ಕಾರ್ಯಕ್ರಮ ಉದ್ಘಾಟಿಸುವರು. ಗೋವಿಂದ ಜೋಶಿ ಅಧ್ಯಕ್ಷತೆ ವಹಿಸುವರು ಎಂದರು.
ಸಂಟಕರಾದ ಕೃಷ್ಣ ಗಂಡಗಾಳೇಕರ, ಕಿರಣ ಭರಾಡೆ, ಮುಕುಂದಗೌಡ ಗುಗ್ಗರಿ ಗೋಷ್ಠಿಯಲ್ಲಿದ್ದರು.