ಮೋರೆರ್ ಬೆಟ್ಟಕ್ಕೆ ಸಂರಕ್ಷಣೆ ಅಗತ್ಯ

10 gvt 02
ಪ್ರಾಗೈತಿಹಾಸಿಕ ನೆಲೆ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಮೋರೆರ್ ಬೆಟ್ಟಕ್ಕೆ ಮಹಾರಾಷ್ಟ್ರದ ನಾಗಪುರ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇಲಾಖೆ ಅಧ್ಯಯನ ವಿಭಾಗದ ಅಧೀಕ್ಷಕ ರಮೇಶ ಮೂಲಿಮನಿ, ಪ್ರತಿನಿಧಿಗಳಾದ ಡಾ.ಕಿಶೋರ್ ಸೋಲಾಪುರಕರ್, ಮಾನವೇಂದ್ರ, ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಇತರರಿದ್ದರು.
Published on

ಗಂಗಾವತಿ: ಪ್ರಾಗೈತಿಹಾಸಿಕ ನೆಲೆ ತಾಲೂಕಿನ ಹಿರೇಬೆಣಕಲ್ ಮೋರೆರ್ ಬೆಟ್ಟಕ್ಕೆ ಮಹಾರಾಷ್ಟ್ರದ ನಾಗಪುರ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿ ಪರಿಶೀಲಿಸಿತು.

ಇಲಾಖೆ ಅಧ್ಯಯನ ವಿಭಾಗದ ಅಧೀಕ್ಷಕ ರಮೇಶ ಮೂಲಿಮನಿ ನೇತೃತ್ವದ ತಂಡ ನೆಲೆ ಸಮಾಧಿಗಳು, ಗವಿಚಿತ್ರಗಳು ಮತ್ತು ಮಾನವಾಕೃತಿ ಶಿಲೆಗಳನ್ನು ವೀಕ್ಷಿಸಿದರು. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದ ಅಧಿಕಾರಿಗಳ ತಂಡ, 3ಸಾವಿರ ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಈ ಬಗ್ಗೆ ರಮೇಶ ಮೂಲಿಮನಿ ಮಾತನಾಡಿ, ಹಿರೇಬೆಣಕಲ್ ನೆಲೆ ದೇಶದ ಅತ್ಯಂತ ಮಹತ್ವದ ಪ್ರಾಗೈತಿಹಾಸಿಕ ನೆಲೆಯಾಗಿದೆ. ಆದಿಮಾನವನ ಜೀವನ ಸಂಸ್ಕೃತಿ ಅರಿಯಲು ಸಹಕಾರಿಯಾಗಿದೆ. ವಸತಿನೆಲೆ, ವಿವಿಧರೀತಿ ಸಮಾಧಿಗಳು, ಗವಿಚಿತ್ರಗಳು ಮಹತ್ವದ ಪುರಾವೆ ಒದಗಿಸುತ್ತಿವೆ.

ಇಲ್ಲಿ ಇರುವಷ್ಟು ವೈವಿಧ್ಯಮಯ ಶಿಲಾಸಮಾಧಿಗಳು ದೇಶದ ಬೇರೆ ಎಲ್ಲೂ ಇಲ್ಲ. ಸಂರಕ್ಷಣೆ ಕೊರತೆಯಿಂದ ಅಮೂಲ್ಯ ಸ್ಥಳ ಹಲವಾರು ಕಾರಣಗಳಿಂದ ನಾಶವಾಗುತ್ತಿದೆ. ಸ್ಥಳದ ರಕ್ಷಣೆ, ಅಭಿವೃದ್ಧಿಗೊಳಿಸಿ ಪ್ರವಾಸಿಕೇಂದ್ರವನ್ನಾಗಿ ರೂಪಿಸುವುದಕ್ಕಾಗಿ ಇಲಾಖೆಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದರು.

ಮೋರೆರ್ ಬೆಟ್ಟದ ವೈಶಿಷ್ಟ್ಯತೆ ಕುರಿತು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಮಾಹಿತಿ ನೀಡಿದರು. ತಂಡದ ಪ್ರತಿನಿಧಿಗಳಾದ ಡಾ.ಕಿಶೋರ್ ಸೋಲಾಪುರಕರ್, ಮಾನವೇಂದ್ರ, ಕಪೀಲ್ ಚುಟೋಲೆ, ಮುರುಳಿಧರರಾವ್ ಕಡಾವ್, ಸ್ಥಳೀಯರಾದ ಮಂಜುನಾಥ ಗುಡ್ಲಾನೂರ, ವಿರೇಶ ಅಂಗಡಿ, ನೆಲೆ ರಕ್ಷಕರಾದ ಪಂಪಾಪತಿ, ವೀರಭದ್ರಪ್ಪ, ನಾಗರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net