ಹೆಚ್ಚಿನ ಇಳುವರಿಗೆ ತೊಗರಿ ಕುಡಿ ಚಿವುಟಿ

krushi
ಕಂಪ್ಲಿ ತಾಲೂಕಿನ ದೇವಸಮುದ್ರದಲ್ಲಿ ತೊಗರಿ ಬೆಳೆ ಸುಧಾರಿತ ಬೇಸಾಯ ತಾಂತ್ರಿಕ ವಿಷಯಗಳ ಜಾಗೃತಿ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಶ್ರೀಧರ್ ರೈತರಿಗೆ ಮಾಹಿತಿ ನೀಡಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರೇಣುಕರಾಜ, ರೈತರಾದ ಹೇಮಂತ್, ಸೋಮಪ್ಪ, ಮೌನೇಶ್, ಹೊನ್ನೂರಪ್ಪ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಮದ ರೈತ ಬಾಲಕೋಟಯ್ಯನ ಹೊಲದಲ್ಲಿ ಕಂಪ್ಲಿ ರೈತ ಸಂಪರ್ಕ ಕೇಂದ್ರದಿಂದ ತೊಗರಿ ಬೆಳೆ ಸುಧಾರಿತ ಬೇಸಾಯ ತಾಂತ್ರಿಕ ವಿಷಯಗಳ ಜಾಗೃತಿ ಕಾರ್ಯಕ್ರಮ ಗುರುವಾರ ನಡೆಯಿತು.

ಜಾಗೃತಿ ಕಾರ್ಯಕ್ರಮ

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್ ಮಾತನಾಡಿ, ತೊಗರಿ ಬೀಜ ಬಿತ್ತುವ ಮುನ್ನ ಬೀಜೋಪಚಾರ ಮಾಡಬೇಕು. ಶಿಫಾರಸುಗೊಳಿಸಿದ ಗೊಬ್ಬರಗಳನ್ನು ಮಾತ್ರ ಬಳಸಬೇಕು. ತೊಗರಿ ಜೊತೆ ಜೋಳ, ಶೇಂಗಾ, ಮೆಕ್ಕೆಜೋಳವನ್ನು, ಭತ್ತದೊಂದಿಗೆ ಮೆಕ್ಕೆಜೋಳ, ಜೋಳ, ಹತ್ತಿ ಇತ್ಯಾದಿ ಬೆಳೆಗಳನ್ನು ಬದುವುಗಳ ಮೇಲೆ ಬೆಳೆದಲ್ಲಿ ಲಾಭದಾಯಕವಾಗುತ್ತದೆ ಜೊತೆಗೆ ಸೊರಗು ರೋಗ ಬಾಧೆ ಕಡಿಮೆಯಾಗುತ್ತದೆ ಎಂದರು.

ಮುಖ್ಯವಾಗಿ ತೊಗರಿ ಬಿತ್ತನೆ ಮಾಡಿದ 50ದಿನಗಳಲ್ಲಿ ಬೆಳೆ ಮೇಲ್ಭಾಗದ ಕುಡಿಯನ್ನು ಐದಾರು ಸೆಂಟಿಮೀಟರ್‌ನಷ್ಟು ಕುಡಿ ಚಿವುಟಬೇಕು. ಇದರಿಂದ ಹೆಚ್ಚಿನ ಸಂಖ್ಯೆಯ ಕವಲೊಡೆದು ಇಳುವರಿ ಪ್ರಮಾಣ ಹೆಚ್ಚುತ್ತದೆ. ಹೂ ಬಿಡುವ ಸಮಯದಲ್ಲಿ ತತ್ತಿನಾಶಕಗಳನ್ನು ಸಿಂಪಡಿಸಬೇಕು. ಮೊಗ್ಗು, ಹೂ, ಕಾಯಿ ಉದುರುವಿಕೆ ತಡೆಯಲು ಬೆಳೆಯುವ ಮೊಗ್ಗು ಹಂತದಲ್ಲಿ ಶಿಫಾರಸು ಮಾಡಿದ ನಾಶಕಗಳನ್ನು ಸಿಂಪಡಿಸಬೇಕು. ತೊಗರಿ ಇಳುವರಿ ಹೆಚ್ಚಿಸಲು ಸಸ್ಯವರ್ಧಕಗಳನ್ನು ಸಿಂಪಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net