ಅಗತ್ಯಕ್ಕಿಂತ ಹೆಚ್ಚು ಸಂಗ್ರಹ ಸಲ್ಲ

06 GVT 03
ಗಂಗಾವತಿ ತಾಲೂಕಿನ ರಾಮದುರ್ಗ(ಗೂಗಿಬಂಡಿಕ್ಯಾಂಪ್) ಬಾಲಕರ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದಿಂದ ಹಮ್ಮಿಕೊಂಡಿದ್ದ ವಾರ್ಷಿಕ ಸೇವಾ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಟಿ.ಸಿ.ಶಾಂತಪ್ಪ, ಸ.ಕಿ.ಪ್ರಾ.ಶಾಲೆ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ, ಮುಖ್ಯಶಿಕ್ಷಕ ಕೆ.ಎಸ್. ಶ್ರೀನಿವಾಸ, ಗ್ರಂಥಪಾಲಕ ರಮೇಶ ಗಬ್ಬೂರ್, ಪ್ರಾಚಾರ್ಯ ಬಸಪ್ಪ ನಾಗೋಲಿ ಇತರರಿದ್ದರು.
Published on

ಗಂಗಾವತಿ: ಪ್ರಕೃತಿ ಅಸಮತೋಲನ ಉಂಟಾಗದಂತೆ ಎಲ್ಲರೂ ಗಮನಹರಿಸುವುದು ಮುಖ್ಯ ಎಂದು ಬಾಲಕಿಯರ ಎಂಎನ್‌ಎಂ ಪ.ಪೂ.ಕಾಲೇಜು ಪ್ರಾಚಾರ್ಯ ಟಿ.ಸಿ.ಶಾಂತಪ್ಪ ಹೇಳಿದರು.

ತಾಲೂಕಿನ ರಾಮದುರ್ಗ(ಗೂಗಿಬಂಡಿಕ್ಯಾಂಪ್) ಬಾಲಕರ ಸರ್ಕಾರಿ ಪ.ಪೂ.ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸೇವಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಯಾವುದೇ ವಸ್ತುಗಳನ್ನು ಅಗತ್ಯವಿರುವಷ್ಟು ಮಾತ್ರ ಬಳಸಬೇಕು. ಪ್ರಾಣಿ-ಪಕ್ಷಿಗಳು ತಮಗೆ ಎಷ್ಟು ಬೇಕು, ಅಷ್ಟೇ ಬಳಸುತ್ತಿವೆ. ಆದರೆ ಮನುಷ್ಯ ಮಾತ್ರ ವಸ್ತುಗಳನ್ನು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವುದರ ಮೂಲಕ ಪ್ರಾಕತಿಕ ಅಸಮತೋಲಕ್ಕೆ ಕಾರಣನಾಗುತ್ತಿದ್ದಾನೆ ಎಂದರು.
ಶಿಬಿರಾಧಿಕಾರಿ ರುದ್ರೇಶ ತಬಾಲಿ ಮಾತನಾಡಿ, ಎನ್ನೆಸ್ಸೆಸ್ ಶಿಬಿರದ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದರು. 7 ದಿನದ ಶಿಬಿರದ ಕುರಿತು ಶಿಬಿರಾಧಿಕಾರಿ ಡಾ. ಲಿಂಗಣ್ಣ ಜಂಗಮರಹಳ್ಳಿ ಮಾಹಿತಿ ನೀಡಿದರು.

ಗ್ರಾಪಂ ಸದಸ್ಯೆ ಲಕ್ಷ್ಮಮ್ಮ ಗುಂಟೂರು, ಎಸ್ಡಿಎಂಸಿ ಉಪಾಧ್ಯಕ್ಷೆ ನಿರ್ಮಲಾ, ಮುಖಂಡರಾದ ಎಸ್. ಸೂರ್ಯನಾರಾಯಣ, ಕುಮಾರಸ್ವಾಮಿ, ಮಹೇಶ ಸ್ವಾಮಿ, ಹನುಮಂತಪ್ಪ, ಸಿಎಚ್ ಶ್ರೀನಿವಾಸ, ಎಸ್. ಭಾಸ್ಕರ ರಾವ್, ಎಸ್.ವಿ ರಾಮರಾವ್, ಬಸಯ್ಯಸ್ವಾಮಿ, ಬಸವನದುರ್ಗ ಪ್ರೌಢಶಾಲೆ ಮುಖ್ಯಶಿಕ್ಷಕ ಛತ್ರಪ್ಪ ತಂಬೂರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net