80ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು

mdl ration protst
ಬಿಪಿಎಲ್ ಕಾರ್ಡ್ ರದ್ದಾಗಿದ್ದರಿಂದ ಛತ್ತರ ನ್ಯಾಯಬೆಲೆ ಅಂಗಡಿ ಮುಂದೆ ವಿವಿಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಪಂ ಮಾಜಿ ಸದಸ್ಯ ಭೀಮನಗೌಡ, ವಿರುಪಣ್ಣ ಕಂಬಳಿ, ವಿರುಪಣ್ಣ ನಂದಿಹಾಳ ಇತರರಿದ್ದರು.
Published on

ಮುದಗಲ್: ಎಂಬತ್ತಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದಾದ ಹಿನ್ನೆಲೆಯಲ್ಲಿ ಛತ್ತರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ವಿವಿಧ ಗ್ರಾಮಗಳ ಜನರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 800ಕ್ಕೂ ಹೆಚ್ಚು ಬಿಪಿಎಲ್ ಪಡಿತರ ಕಾರ್ಡ್‌ಗಳಿದ್ದು, ರಾಮಜಿನಾಯ್ಕ ತಾಂಡಾ, ಛತ್ತರ ರೋಡ್ ತಾಂಡಾ, ತೊಡಕಿ ಮತ್ತು ತೊಡಕಿ ತಾಂಡಾ, ಗೊಲ್ಲರಹಟ್ಟಿ , ಕುಮಾರಖೇಡ ಮತ್ತು ಛತ್ತರ ಗ್ರಾಮದ ಕೆಲ ಫಲನುಭವಿಗಳ ಪಡಿತರ ಕಾರ್ಡ್ ರದ್ದುಪಡಿಸಲಾಗಿದೆ.

ಏಕಾಏಕಿ ಆಹಾರ ಇಲಾಖೆ ಬಡವರ ಕಾರ್ಡ್ ರದ್ದು ಮಾಡಿದರೆ ಹೇಗೆ? ಈ ಬಗ್ಗೆ ವಿಚಾರಿಸಿದರೆ ಹಿರಿಯ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ಪಡಿತರ ಚೀಟಿಗಳ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ನ್ಯಾಯಬೆಲೆ ಅಂಗಡಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಪಂ ಮಾಜಿ ಸದಸ್ಯ ಭೀಮನಗೌಡ, ವಿರುಪಣ್ಣ ಕಂಬಳಿ, ವಿರುಪಣ್ಣ ನಂದಿಹಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net