50ಕ್ಕೂ ಹೆಚ್ಚು ಟಗರುಗಳ ತಾಕತ್ತು ಪ್ರದರ್ಶನ

RBK 18-1 TAGARU
ರಬಕವಿ ನಗರದ ಹಳೇ ಬಸ್ ನಿಲ್ದಾಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲಿ ನಡೆದ ಟಗರು ಕಾಳಗ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
Published on

ರಬಕವಿ/ಬನಹಟ್ಟಿ: ಕಾಲು ಕೆರೆದು ಮುನ್ನುಗ್ಗಿ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆಯುತ್ತಿರುವ ಟಗರುಗಳು, ಧೂಳಿನ ಅಬ್ಬರದಲ್ಲಿ ಟಗರುಗಳನ್ನು ನಿಯಂತ್ರಿಸುವ ಮಾಲೀಕರು, ಕೇಕೆ, ಶಿಳ್ಳೆ, ಚಪ್ಪಾಳೆ ತಟ್ಟುತ್ತಾ ಹುರಿದುಂಬಿಸುವ ಝಲಕ್ ನೋಡ್ತಾ ಇದ್ರೆ ಮೈ ರೋಮಾಂಚನಗೊಳ್ಳುತ್ತಿತ್ತು.
ಇದು ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಮತ್ತು ನಗರದ ಹಿರಿಯರ ನೇತೃತ್ವದಲ್ಲಿ ರಬಕವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಟಗರಿನ ಕಾಳಗದಲ್ಲಿ ಕಂಡು ಬಂದ ದೃಶ್ಯ.

ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಿಂದ 62ಕ್ಕೂ ಹೆಚ್ಚು ಟಗರುಗಳು, ಮಾಲೀಕರು ಪಾಲ್ಗೊಂಡಿದ್ದರು. ಹಾಲು ಹಲ್ಲು, 2 ಹಲ್ಲು, 4, 6 ಮತ್ತು 8 ಹಲ್ಲುಗಳ ಟಗರುಗಳು ಕಾಳಗದಲ್ಲಿ ತಲೆಗೆ ತಲೆ ಕೊಟ್ಟು ಶಕ್ತಿ ಪ್ರದರ್ಶಿಸಿದವು. ಒಂದಕ್ಕೊಂದು ಗುದ್ದುವ ಮೂಲಕ ಸ್ಥಳದಲ್ಲಿದ್ದ ನೂರಾರು ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದವು. ಪ್ರೇಕ್ಷಕರು ಟಗರು ಕಣದೊಳಗೆ ಬಾರದಂತೆ ಬ್ಯಾರಿಕೇಡ್ ಹಾಕಲಾಗಿತ್ತು.

ಚಿಮ್ಮಡ, ತೇರದಾಳ, ನಾವಲಗಿ, ಹಳಿಂಗಳಿ, ಜಗದಾಳ, ಹನಗಂಡಿ, ಯಲ್ಲಟ್ಟಿ ಸೇರಿ ವಿವಿಧೆಡೆಯಿಂದ ಅಪಾರ ಜನರು ಆಗಮಿಸಿದ್ದರು.

ಟಗರಿಗಿದ್ದ ಹೆಸರು: ಹಂಟಿಂಗ್ ಅಪ್ಪು, ಪವರ್ ಸ್ಟಾರ್ ಕರಿಯ, ಕ್ರಾಂತಿವೀರ ರಾಯಣ್ಣ, ದುರ್ಗದ ಹುಲಿ, ಮಾರಿ ಹೀಗೆ ಹತ್ತಾರು ಹೆಸರುಗಳನ್ನು ಇಟ್ಟುಕೊಂಡ ಟಗರುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ರಾತ್ರಿವರೆಗೂ ಸೆಣಸಾಟ ನಡೆದಿತ್ತು. ಗೆದ್ದ ಟಗರು ಮಾಲೀಕರಿಗೆ ಪ್ರಶಸ್ತಿ, ಡಾಲ್ ಹಾಗೂ ನಗದು ಬಹುಮಾನ ಇಡಲಾಗಿತ್ತು.

ಹಿರಿಯರಾದ ಮಾರುತಿ ನಾಯಕ, ಬಾಲಚಂದ್ರ ಉಮದಿ, ಶಂಕರ ಪಾಟೀಲ, ಈರಣ್ಣ ಗುಣಕಿ, ಮಹಾದೇವ ಪಾಲಭಾಂವಿ, ವಲಿಸಾಬ ಹುಡೇದಮನಿ, ಬೆನಕಪ್ಪ ಬೆಕ್ಕೇರಿ, ಮಹಾದೇವಿ ತುರಾದಿ, ಹನುಮಂತ ಪೂಜಾರಿ, ಪ್ರಭು ಪೂಜಾರಿ, ಭೀಮಶಿ ಪಾಟೀಲ, ಚನ್ನಪ್ಪ ತೇಲಿ, ಬಸವರಾಜ ಖಪಲಿ, ಪ್ರಭು ಉಮದಿ, ಶಿವಾನಂದ ಹೊಸಮನಿ, ಸಂಗಮೇಶ ಹತಪಾಕಿ, ರೇವಣ್ಣ ಉಮದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net