

ಗಂಗೊಳ್ಳಿ: ಬುಧವಾರ ಸಂಜೆಯಿಂದ ಕುಂದಾಪುರ, ಬೈಂದೂರು ತಾಲೂಕಾದ್ಯಂತ ಭಾರಿ ಗಾಳಿ-ಮಳೆಯಾಗುತ್ತಿದೆ. ಇದರಿಂದ ಹಲವೆಡೆ 50ಕ್ಕೂ ಮಿಕ್ಕಿ ಮನೆಗಳಿಗೆ ಮರ ಬಿದ್ದು ಹಾನಿಯಾಗಿದೆ. ಅಡಕೆ ಮರಗಳು ಧರಾಶಾಯಿಯಾಗಿವೆ.
ಹೆಮ್ಮಾಡಿ ಗ್ರಾಪಂ ವ್ಯಾಪ್ತಿಯ ಗುಂಡಿಕೊಡ್ಲು ಸೀತಾ ದೇವಾಡಿಗರ ಮನೆ ಮೇಲೆ ಮಾವಿನ ಮರ ಬಿದ್ದು, ಮನೆ ಸಂಪೂರ್ಣ ಹಾನಿಯಾಗಿದೆ. ಮನೆಯೊಳಗೆ ಮಲಗಿದ್ದ ಶಂಕರ ದೇವಾಡಿಗರ ತಲೆ, ಮೈಮೇಲೆ ಹೆಂಚು ಬಿದ್ದು, ಗಾಯಗೊಂಡಿದ್ದು, ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿವಿ, ಇನ್ನಿತರ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿದೆ.
ಕೋಣಿ ಗ್ರಾಮದ ಜಗದೀಶ ಪೂಜಾರಿ, ಬಸವ ಪೂಜಾರಿ, ಅಂಬಿಕಾ, ಬಳ್ಕೂರು ಗ್ರಾಮದ ಲಚ್ಚ ಪೂಜಾರಿ, ಸುಮತಿ, ಗಂಗೊಳ್ಳಿಯ ಜಹೀಲ್, ಅಂಪಾರಿನ ಶೃಂಗಾರಿ ಶೆಡ್ತಿ, ಉಳ್ತೂರಿನ ರಾಮಕ್ಕ ಶೆಡ್ತಿ, ಮಾಲತಿ ಶೆಡ್ತಿ, ಕೋಟೇಶ್ವರ ಗ್ರಾಮದ ಚಂದ್ರಾವತಿ, ಬಸ್ರೂರು ಗ್ರಾಮದ ನೀಮಾ, ಕುಂದಬಾರಂದಾಡಿ ಗ್ರಾಮದ ಲೀಲಾವತಿ, ದೊಟ್ಟ ಪೂಜಾರಿ, ಹಕ್ಲಾಡಿ ಗ್ರಾಮದ ಸುಮತಿ, ಪದ್ದು ಪೂಜಾರ್ತಿ, ಗಿರಿಜಾ, ಬೆಳ್ಳಾಲ ಗ್ರಾಮದ ಕೃಷ್ಣಪ್ಪ ಶೆಟ್ಟಿ, ಗುಲ್ವಾಡಿ ಗ್ರಾಮದ ತಿಮ್ಮ ಪೂಜಾರಿ, ಆನಗಳ್ಳಿ ಗ್ರಾಮದ ಅಂತೋನಿ ಬರೆಟ್ಟೋ, ಫಿಲೋಮಿನಾ ಡಿಸೋಜ, ಪ್ರಭಾವತಿ ಶೆಟ್ಟಿ, ಮೊಳಹಳ್ಳಿ ಗ್ರಾಮದ ನಾಗು, ಕಂದಾವರ ಗ್ರಾಮದ ಪ್ರಶಾಂತ್ ಪೂಜಾರಿ, ಕಾವ್ರಾಡಿ ಗ್ರಾಮದ ಜಲಜಾ, ಸಣ್ಣಮ್ಮ ಮೊಗೇರ್ತಿ, ದುರ್ಗಿ, ನಿಲೋಫರ್, ಹಳ್ನಾಡು ಗ್ರಾಮದ ಶಾಬುದ್ಧಿನ್, ವಕ್ವಾಡಿ ಗ್ರಾಮದ ಚಂದ್ರಯ್ಯ ಆಚಾರಿ, ಗುಜ್ಜಾಡಿ ಗ್ರಾಮದ ಮಾಲತಿ, ಗಿರಿಜಾ ಖಾರ್ವಿ, ನೂಜಾಡಿ ಗ್ರಾಮದ ಸರೋಜಾ ಕೊಠಾರಿ, ಪದ್ದು ಮೊಗವೀರ, ಬಸ್ರೂರು ಗ್ರಾಮದ ಮೂಡ್ಕೇರಿ ದಯಾನಂದ ಜೋಗಿ, ಹಟ್ಟಿಕುದ್ರುವಿನ ಬೇಬಿ ಪೂಜಾರ್ತಿ, ಸುರೇಶ್ ಪೂಜಾರಿ, ಗೋಪಾಡಿ ಗ್ರಾಮದ ಗುಲಾಬಿ, ಗಂಗೊಳ್ಳಿ ಸುಲೋಚನಾ ಶೇರೆಗಾರ್, ನೇತ್ರಾವತಿ, ಪದ್ಮಾವತಿ ಶೇರೆಗಾರ್, ಕೆಂಚನೂರು ಗ್ರಾಮದ ರಾಜು ಪೂಜಾರಿ, ನೇತ್ರಾವತಿ, ಆಲೂರು ಗ್ರಾಮದ ಗುಲಾಬಿ ಶೆಡ್ತಿ, ತ್ರಾಸಿ ಗ್ರಾಮದ ಲಕ್ಷ್ಮೀ, ಹೊಸಾಡು ಗ್ರಾಮದ ಕರಿಯ, ಪದ್ದು, ಕೊರ್ಗಿಯ ಬಾಬಿ, ಹೆಮ್ಮಾಡಿ ಗ್ರಾಮದ ಸುಮತಿ, ಕುಳಂಜೆ ಗ್ರಾಮದ ಸುಬ್ರಹ್ಮಣ್ಯ ಮೊಗವೀರ ಮನೆಗಳಿಗೆ ಮರ ಬಿದ್ದು ಹಾನಿಯಾಗಿದೆ.
ದೇವಲ್ಕುಂದ ನೀಲು, ಗುಜ್ಜಾಡಿಯ ಕೃಷ್ಣ ಕಾರಂತ, ಹೆಮ್ಮಾಡಿಯ ಸೀತಾ ಪೂಜಾರ್ತಿ, ಮಚ್ಚಟ್ಟು ಗ್ರಾಮದ ಬಾಬು ಪೂಜಾರಿ ಅವರ ಮನೆಯ ದನದ ಕೊಟ್ಟಿಗೆಗಳಿಗೆ ಮರ ಬಿದ್ದು ಹಾನಿಯಾಗಿದೆ.