

ಜಯಪುರ: ಮೇಗುಂದಾ ಹೋಬಳಿಯಾದ್ಯಂತ ಧಾರಕಾರ ಮಳೆಗೆ ಗ್ರಾಮೀಣ ಭಾಗದ ನೂರಾರು ರಸ್ತೆಗಳು ಹಾನಿಗೊಳಗಾಗಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯ ಗುಡ್ಡೆತೋಟ ಮೇಲಿನ ಸೈಟ್‌ನ ನಾರಾಯಣ ಮತ್ತು ಐತ್ತಪ್ಪ ಎಂಬುವವರ ಮನೆ ಮುಂಭಾಗದ ಅಂಗಳ ಕುಸಿದಿದ್ದು, ಸೋಮವಾರ ರಾತ್ರಿಯೇ ನಾರಾಯಣ ಮತ್ತು ಐತ್ತಪ್ಪ ಕುಟುಂಬವನ್ನು ಸಮೀಪದ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಎಂಟು ವರ್ಷಗಳಿಂದ ಇಲ್ಲಿನ 17 ಮನೆಗಳು ಕುಸಿಯುವ ಆತಂಕ ಎದುರಿಸುತ್ತಿದ್ದು, ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿಲ್ಲ. ಈಗ ತಾತ್ಕಾಲಿಕವಾಗಿ ಗ್ರಾಪಂ ಕಟ್ಟಡಕ್ಕೆ ನಿರಾಶ್ರಿತ ಕುಟುಂಬವನ್ನು ಸ್ಥಳಾಂತರಿಸಿ ಗ್ರಾಪಂನಿಂದ ಅಗತ್ಯ ವ್ಯವಸ್ಥೆಗಳನ್ನು ಸ್ಥಳಕ್ಕೆ ತಹಸೀಲ್ದಾರ್ ಹುಸೇನ್, ನೊಡಲ್ ಅಧಿಕಾರಿ ಆರ್‌ಎ್ಒ ರಂಗನಾಥ್, ಗ್ರಾಪಂ ಅದ್ಯಕ್ಷರು, ಸದಸ್ಯರು ಭೇಟಿ ನೀಡಿದರು.
ಅಲೆಹೊಂಡ ಗ್ರಾಮದ ಸೀತು ಎಂಬುವವರ ಮನೆ ಮೇಲ್ಛಾವಣಿ ಕುಸಿದಿದೆ. ರಾತ್ರಿ ಮಲಗಿದ ವೇಳೆ ಮೇಲ್ಚಾವಣಿ ಕುಸಿತದ ಶಬ್ಧ ಕೇಳಿ ಮನೆಯಿಂದ ಹೊರಗೆ ಓಡಿ ಬಂದ ಕಾರಣ ಸೀತು, ಬೆಳ್ಳಯ್ಯ, ಹೇಮಾವತಿ ಹಾಗೂ ಮಕ್ಕಳು ಬಚಾವಾಗಿದ್ದಾರೆ. ಸ್ಥಳಕ್ಕೆ ಗುಡ್ಡೆತೋಟ ಗ್ರಾಪಂ ಪಿಡಿಒ ಶೋಭ, ಗ್ರಾಪಂ ಸದಸ್ಯ ಕೀರ್ತಿರಾಜ್ ಭೇಟಿ ನೀಡಿದರು. ಹೇರೂರು ಗ್ರಾಪಂಯ ಹಾಡುಗಾರು, ಕಿಬ್ಳಿ ರಸ್ತೆಗೆ ಹೊಳೆ ನೀರು ನುಗ್ಗಿ ಹಾನಿಯಾಗಿದ್ದು, ಸ್ಥಳಕ್ಕೆ ಎಇಇ ಅಶೋಕ್, ಇಂಜಿನಿಯರ್ ಸುನಿಲ್, ಗ್ರಾಪಂ ಅಧ್ಯಕ್ಷ ಅಶ್ವಥ್, ಸದಸ್ಯೆ ಅನುಪಮ, ಪಿಡಿಒ ಮಹೇಶ್ ಭೇಟಿ ನೀಡಿದರು.