40ಕ್ಕೂ ಹೆಚ್ಚು ಖಾಸಗಿ ಬಸ್​ ಜಪ್ತಿ

31_10_2025_BGR_RURAL_PAGE_5
ಹೊರರಾಜ್ಯದ ಖಾಸಗಿ ಬಸ್​ಗಳನ್ನು ದೇವನಹಳ್ಳಿ ಬಳಿ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದರು.
Published on

ದೇವನಹಳ್ಳಿ : ಕರ್ನೂಲ್​ ಬಳಿ ಸ್ಲೀಪರ್​ ಕೋಚ್​ ಬಸ್​ ಅಗ್ನಿ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸಾರಿಗೆ ಇಲಾಖೆ ಅಪರ ಆಯುಕ್ತ್ತೆ ಓಂಕಾರೇಶ್ವರಿ, ಜಂಟಿ ಆಯುಕ್ತೆ ಶೋಭಾ ನೇತೃತ್ವ ತಂಡ ಗುರುವಾರ ದೇವನಹಳ್ಳಿ ನವಯುಗ ಟೋಲ್​ ಬಳಿ ಕಾರ್ಯಾಚರಣೆ ನಡೆಸಿ ಸುರಕ್ಷತಾ ಕ್ರಮ ಅನುಸರಿಸದ 40ಕ್ಕೂ ಹೆಚ್ಚು ಖಾಸಗಿ ಸ್ಲೀಪರ್​ ಕೋಚ್​ ಬಸ್​ಗಳನ್ನು ಜಪ್ತಿ ಮಾಡಿದರು. ಪ್ರಯಾಣಿಕರನ್ನು ಬದಲಿ ವ್ಯವಸ್ಥೆ ಮೂಲಕ ಬೆಂಗಳೂರಿಗೆ ಕಳುಹಿಸಿಕೊಟ್ಟರು. 45ಕ್ಕೂ ಹೆಚ್ಚು ಸಿಬ್ಬಂದಿ ತಂಡದೊಂದಿಗೆ ದೇವನಹಳ್ಳಿ ಟೋಲ್​ ಬಳಿ ಹೊರರಾಜ್ಯದಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲಾಯಿತು. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಾಗೂ ಬಸ್​ಗಳಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ತಪಾಸಣೆ ನಡೆಸಿ ನ್ಯೂನತೆ ಇರುವ 40ಕ್ಕೂ ಹೆಚ್ಚು ಬಸ್​ಗಳನ್ನು ಜಪ್ತಿ ಮಾಡಿ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಪರ ಆಯುಕ್ತೆ ಓಂಕಾರೇಶ್ವರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net