

ದೇವನಹಳ್ಳಿ : ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ ಮತ್ತು ಸಿಬ್ಬಂದಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಖ್ಯಾಧಿಕಾರಿ ಎ.ಶಿವಮೂರ್ತಿ ಮಾರ್ಗದರ್ಶನದಲ್ಲಿ ಪಟ್ಟಣದ ಹಲವೆಡೆ ಪ್ಲಾಸ್ಟಿಕ್ ಮಾರಟ ಮಳಿಗೆ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿದರು.
ಪರಿಸರಕ್ಕೆ ಹಾನಿಕಾರಕ ಮತ್ತು 70 ಮೈಕ್ರಾನ್ಗಿಂತಲೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳಾದ ಲೋಟ, ಡೈನಿಂಗ್ಟೇಬಲ್ ರೋಲ್, ಸ್ಪೂನ್, ಕವರ್ ಸೇರಿ ಮುಂತಾದವುಗಳನ್ನು ಮಾರಾಟ ಮಾಡಬಾರದು ಎಂದು ಪುರಸಭೆಯಿಂದ ನಿರ್ದೇಶನ ನೀಡಿದ್ದರೂ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಳಿಗೆಗಳ ಮೇಲೆ ದಾಳಿ ನಡೆಸಿ 350 ಕೆಜಿಗೂ ಅಧಿಕ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು 20 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ಆರೋಗ್ಯ ನಿರೀಕ್ಷಕಿ ಶ್ರೀದೇವಿ ತಿಳಿಸಿದರು. ಮೂರು ಬಾರಿ ದಂಡ ವಿಧಿಸಿದರೂ ಮಾರಾಟ ಮಾಡುವವರ ಮಳಿಗೆಗಳನ್ನು ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿಬ್ಬಂದಿ ಎಫ್.ಎಸ್.ಟಿಯ ಆದರ್ಶ, ಗೋಪಾಲ್, ಅನಿಲ್, ಮುನಿರಾಜು, ಮಂಜುನಾಥ್ ಇದ್ದರು.