ಬಿಸಿಯೂಟ ಸೇವಿಸಿ 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

DSC_1944 (1)03
Published on


ಚಿತ್ರದುರ್ಗ: ಬಿಸಿಯೂಟ ಸೇವನೆಯ ಬಳಿಕ ಅಸ್ವಸ್ಥರಾಗಿದ್ದ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ 1-7ನೇ ತರಗತಿಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹಾಗೂ ಬ್ಯಾಂಕ್ ಕಾಲನಿಯ ಮೌಲನಾ ಆಜಾದ್ ಶಾಲೆಯ 6-10ನೇ ತರಗತಿಯ ಮೂವರು ವಿದ್ಯಾ ರ್ಥಿಗಳನ್ನು ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಾಹ್ನ ಬಿಸಿಯೂಟ ಸೇವಿಸಿದ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 134 ವಿದ್ಯಾರ್ಥಿಗಳ ಪೈಕಿ ಸ್ವಲ್ಪ ಸಮಯದಲ್ಲಿ ಹಲವರು ವಾಂತಿ ಹಾಗೂ ಹೊಟ್ಟೆನೋವಿನಿಂದ ಬಳಲತೊಡಗಿದ್ದು,ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೊರ ರೋಗಿಗಳಾಗಿ 14ಕ್ಕೂ ಹೆ ಚ್ಚು ವಿದ್ಯಾರ್ಥಿಗಳಿಗೆ ಹಾಗೂ ಒಳ ರೋಗಿಗಳಾಗಿ 20 ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಲಾಗಿದೆ. ಎಲ್ಲ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿ ದ್ದಾರೆ,ಗಂಭೀರವೆನ್ನುವಂಥ ಪರಿಸ್ಥಿತಿ ಇಲ್ಲವೆಂದು ಡಿಎಸ್ ಡಾ.ದೇವರಾಜ್ ತಿಳಿಸಿದ್ದಾರೆ.
ಬಿಸಿಯೂಟಕ್ಕೆಂದು ಮಧ್ಯಾಹ್ನ ಸಿದ್ಧಪಡಿಸಿದ್ದ ಬೆಳೆಸಾರು ಅನ್ನ ಹಾಗೂ ಊಟದ ಜತೆ ಶೇಂಗಾ ಚಿಕ್ಕಿ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಆಹಾರದ ಹಾಗೂ ಚಿಕ್ಕಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಯಾವುದೇ ಆತಂಕ ಪಡುವಂಥ ಸನ್ನಿವೇಶ ಇಲ್ಲ. ಮಕ್ಕಳ ಚಿಕಿತ್ಸೆಗೆ ಎಲ್ಲ ವ್ಯವಸ್ಥೆಯನ್ನು ಜಿಲ್ಲಾಸ್ಪತ್ರೆ ವೈದ್ಯರು ಮಾಡಿಕೊಂಡಿದ್ದಾರೆ. ಅ ಗತ್ಯ ಬೀಳುವಂಥ ಔಷಧಗಳನ್ನು ಕೂಡಲೇ ಖರೀದಿಸುವಂತೆ ವೈದ್ಯರಿಗೆ ಸೂಚಿಸಲಾಗಿದೆ ಎಂದು ಎಡಿಸಿ ತಿಳಿಸಿದ್ದಾರೆ. ಎಸಿ ಎಂ.ಕಾರ್ತಿಕ್, ಡಿವೈಎಸ್‌ಪಿ ಅನಿಲ್‌ಕುಮಾರ್ ಮತ್ತಿತರ ಪೊಲೀಸ್ ಅಧಿಕಾರಿಗಳು,ಬಿಇಒ ನಾಗಭೂಷಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net