ಶಿಬಿರದ ಪ್ರಯೋಜನ ಪಡೆದ 300ಕ್ಕೂ ಅಧಿಕ ಜನ

09 Jaggu 7
ಬೆಳಗಾವಿ ಜೈನ ಸಮಾಜ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ರೋಗಿಗಳು ಆರೋಗ್ಯ ತಪಾಸಣೆ ಮಾಡಿಕೊಂಡರು.
Published on

ಬೆಳಗಾವಿ: ರಾಜ್ಯ ಜೈನ ಜಾಗೃತಿ ಸಂಘ, ಕರ್ನಾಟಕ ಪ್ರಾಂತ ಜೈನ ಮಿಲನ ಮಹಾಸಂಘ ಆರೋಗ್ಯ ವಿಭಾಗ ಮತ್ತು ಆರ್ಥೋ ಮತ್ತು ಟ್ರಾಮಾ ಸೆಂಟರ್ ಜಂಟಿಯಾಗಿ ಬೆಳಗಾವಿಯ ಜೈನ ಸಮಾಜ ಆವರಣದಲ್ಲಿ ಜೂ.7 ಮತ್ತು 8ರಂದು ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆಯಿತು. ಆಚಾರ್ಯ 108 ಗುಣಧರ ನಂದಿ ಮುನಿಮಹಾರಾಜ ಅವರ ದೈವಿಕ ಪ್ರೇರಣೆಯಡಿ ಶಿಬಿರ ಆಯೋಜಿಸಲಾಗಿತ್ತು. ಎರಡು ದಿನಗಳ ಶಿಬಿರದಲ್ಲಿ 300ಕ್ಕೂ ಹೆಚ್ಚು ರೋಗಿಗಳು ಉಚಿತ ಆರೋಗ್ಯ ಸೇವೆ ಪಡೆದರು. ರೋಗಿಗಳನ್ನು ಅನುಭವಿ ವೈದ್ಯರಾದ ಡಾ. ದೇವಗೌಡ, ಡಾ.ಜಗದೀಶ ಟಿ. ತಪಾಸಣೆ ಮಾಡಿ, ಸಮಾಲೋಚನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net